ಹೇಳ್ತಿನ್ ಕೇಳಿ!
ಇಡೀ 30 ವರ್ಷ ದ ಈ ಪಯಣದಲ್ಲಿ ಒಂದೂ ಧರಣಿ ಕೂರದೇ, ಯಾವುದೇ ರಾಜಕೀಯ ಪಕ್ಷಗಳತ್ತ ಒಲವು ತೋರದೆ, ಒಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡದೆ, ಒಂದಿಂಚೂ ರಕ್ತ ಹಾರಿಸದೇ ಇಲ್ಲಿರುವ ವ್ಯವಸ್ಥೆಗೆ ಸವಾಲಾಗುವಂತೆ “ ಪ್ರಜೆ” ಎಂಬ ಸರ್ವೋತ್ತಮನ ಹಕ್ಕುಗಳನ್ನು ಉಪಯೋಗಿಸಿಕೊಂಡು, ಒಂದು ಸಂಸ್ಥೆ ಕಟ್ಕೊಂಡು ಒಂದು ನಯಾ ಪೈಸೆ ದುಡ್ಡು ತೆಗೆದುಕೊಳ್ದೆ 36000 ಕ್ಕಿಂತ ಹೆಚ್ಚು ಜನ ಸಾಮಾನ್ಯರ ಕೇಸ್ ಗಳನ್ನ, (ಕೇಸ್ ಗಳಂದ್ರೆ ಭಾರತ ಸರ್ಕಾರವೂ ಆಲಸ್ಯ ಮಾಡಿದ ಕೇಸ್ ಗಳು, ಕರ್ನಾಟಕ ಸರ್ಕಾರದ ಅಧಿಕಾರಿಗಳು ಮಾಡಿದ ಮೂರ್ಖತನದಿಂದ ಜನಿಸಿದವುಗಳು. ಕೋರ್ಟ್ ಕಟಕಟೆ ಹತ್ತದೆ ಬರೀ ಜನಾಭಿಪ್ರಾಯ ( ಪಬ್ಳಿಕ್ ಒಪಿನಿಯನ್) ಮೂಡಿಸಿ ಅಧಿಕಾರಿಗಳಿಗೆ ಜನ ಸಾಮಾನ್ಯರಿಂದ ಛಿಮಾರಿ ಮಾಡಿಸಿ ಬಗೆಹರಿಸಿಕೊಂಡ ಕೇಸ್ ಗಳು. ಇವರ ಪ್ರತಿಯೊಂದು ಸಮಸ್ಯೆ ಬಗೆಹರಿಸಿರುವ ರೀತಿಯನ್ನು ಒಂದೊಂದು ಡಾಕ್ಯುಮೆಂಟರಿ ಮಾಡಿ ಜನರಿಗೆ ತೋರಿಸಿದರೆ ಅಲ್ಲಾಗುವ ಒಂದು ಕ್ರಾಂತಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.
ಈ ಮಹಾನುಭಾವರ ಬಗ್ಗೆ ಹೇಳ್ತಿನ್ ಕೇಳಿ. !!
1975 ರ ತುರ್ತು ಪರಿಸ್ಥಿತಿ, ಸ್ಥಳ ಉಡುಪಿ.
ಆ ಸಮಯದಲ್ಲಿ ಶಾನುಭಾಗ್ ಸರ್ ಇನ್ನು ಕಾಲೇಜು ಯುವಕ. ತುರ್ತು ಪರಿಸ್ಥಿತಿಯೆಂದರೆ ಎಲ್ಲರಿಗೂ ತಿಳಿದಿದೆ ಎಂದು ಭಾವಿಸಿದ್ದೇನೆ. ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಮೊದಲು ಸೇರುತ್ತಿದ್ದು ಜೈಲು ನಂತರ ಮಿಕ್ಕ ವಿಚಾರಣೆ. ಹೀಗೆಯೇ ಶಾನುಭಾಗ್ ಸರ್ ಕಾಲೇಜಿನಲ್ಲೂ ಒಂದು ಗಲಾಟೆ ನಡೆದಿತ್ತು ಆದರೆ ಇವರಿಗೆ ಸಂಬಂಧಪಟ್ಟದ್ದಲ್ಲ ಆದರೂ ಪೋಲಿಸಿನವರು ಕಾಲೇಜಿನಲ್ಲಿದ್ದ ಮುಖ್ಯರನ್ನ ಹಿಡಿದು ಮಂಗಳೂರಿನಲ್ಲಿದ್ದ ಪೊಲೀಸ್ ಹಿರಿಯರ ಮುಂದೆ ಹಾಜರು ಪಡಿಸಿದ್ದರು. ಇವರಲ್ಲಿ ಶಾನುಭಾಗ್ ಸರ್ ಕೂಡ ಒಬ್ಬರು. ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಎಲ್ಲರನ್ನು ವಿಚಾರಿಸಿದಾಗ, ಈ ಹುಡುಗರು ಆ ಗಲಾಟೆಗೆ ಸಂಬಂಧವಿಲ್ಲವೆಂದು ತಿಳಿದು ಅಲ್ಲೇ ಇದ್ದ ಕಿರಿಯ ಅಧಿಕಾರಿಗೆ ಒಂದು ಬಾಂಡ್ ಪತ್ರದ ಮೇಲೆ ಸಹಿ ತೆಗದುಕೊಂಡು ಮನೆಗೆ ಕಳುಹಿಸಲು ಆಗ್ರಹಿಸಿದರು. ಎಲ್ಲರೂ ಮರುಮಾತನಾಡದೆ ಸಹಿ ಮಾಡಿ ಹೋದರೆ ಶಾನುಭಾಗ್ ಸರ್ ಸಹಿ ಮಾಡುವ ಮುಂಚೆ ಕೊನೆಯ ಸಾಲನ್ನು ಓದಿ ಸಹಿ ಮಾಡಲು ಒಪ್ಪಲಿಲ್ಲ. ಕೊನೆಯ ಸಾಲು ಹೀಗಿತ್ತು "Henceforth I will not involve in any anti national activities". ಸಹಿ ಮಾಡಿದರೆ ಅದರರ್ಥ ಈ ಮುಂಚೆ ಮಾಡಿದ್ದು "anti national" ಕೃತ್ಯೆಯಾಗುತ್ತದೆಂದು ಇವರು ಸಹಿ ಮಾಡಲು ನಿರಾಕರಿಸಿದ್ದರು. ಇದರಿಂದ ಪೊಲೀಸ್ ಅಧಿಕಾರಿಗಳು ಇವರನ್ನ ನೇರವಾಗಿ ಕಳಿಸಿದ್ದು ಗೆಸ್ಟ್ ಹೌಸ್ ಗೆ ಅಂದರೆ ಜೈಲಿಗೆ.

ಇಲ್ಲಿಂದ ಪ್ರಾರಂಭವಾದ ಸಾಹಸಗಾಥೆಯನ್ನ ಮುಂದಿನ ಪೀಳಿಗೆಗಳಿಗೂ ವರ್ಗಾಯಿಸುವ ಯೋಚನೆ ಇವರದು. ಜೈಲಿನಲ್ಲಿ ಇವರ ಜೊತೆ ಅನೇಕ ರಾಜಕಾರಣಿಗಳು ಇದ್ದರು. ಕಾರಣ, ತುರ್ತುಪರಿಸ್ಥಿತಿ. ಜೈಲಿನಲ್ಲಿ ಬೆಳಿಗ್ಗೆ ಮತ್ತೆ ಸಂಜೆ ಸಿಗುತ್ತಿದ್ದು ಒಂದು ಲೋಟ ಗಂಜಿ ಬಿಟ್ಟರೆ ಮತ್ತೆಂತದ್ದು ಇಲ್ಲ. ಆದ ಕಾರಣ ಕುತೂಹಲಕ್ಕೆಂದು ಅವರು ಅಲ್ಲಿದ್ದ ಜೈಲಿನ ಅಧಿಕಾರಿಯೊಬ್ಬರನ್ನು ಒಬ್ಬರಿಗೆ ಊಟಕ್ಕೆ ಸರ್ಕಾರದಿಂದ ಬರುವ ಹಣವೆಷ್ಟು ಎಂದು ಕೇಳಿದಾಗ ಸಿಕ್ಕ ಉತ್ತರ “ಸಂಬಂಧಪಟ್ಟವರಿಗೆ ತಿಳಿಸುವೆ, ನಿನಗೆ ತಿಳಿಸುವ ಅಗತ್ಯವಿಲ್ಲವೆಂದು”. ಸರಿ, ಆದದ್ದಾಗಲಿ ಎಂದು ನಾಲ್ಕೈದು ಜನರ ಗುಂಪು ಮಾಡಿ ಊಟ ಮಾಡುವುದಿಲ್ಲವೆಂದು ಹಠ ಹಿಡಿದು ಕುಳಿತಾಗ ಸ್ವಲ್ಪ ಸಮಯದ ತಿಕ್ಕಾಟದ ನಂತರ ಜೈಲಿನ ಮುಖ್ಯ ಅಧಿಕಾರಿಯೋರ್ವರು ಬಂದು ಇವರನ್ನು ಮಾತನಾಡಿಸಬೇಕಾಯಿತು. ವಿಷಯ ತಿಳಿದು ಊಟದ ಖರ್ಚನ್ನು ಹೇಳಲು ನಿರಾಕರಿಸಿದ ಅಧಿಕಾರಿ ಕರೆದು ಈ ಕೂಡಲೇ ಖರ್ಚು ವೆಚ್ಚದ ವಿವರ ನೀಡಬೇಕೆಂದು ಆಗ್ರಹಿಸಿದರು. ಅಂದಿಗೆ (1975 ರಲ್ಲಿ) ಒಬ್ಬರಿಗೆ ಬರುತ್ತಿದ್ದ ಹಣ 16 ರೂಪಾಯಿಗಳು ಎಂದು ತಿಳಿಸಲಾಯಿತು. ಆದರೆ ಇವರಿಗೆ ನೀಡುತ್ತಿದ್ದ ಊಟದ ಖರ್ಚು ಅಂದಾಜು 1 ರೂಪಾಯಿನಷ್ಟಿದ್ದಿರಬೇಕು. ಅಂದಿನಿಂದಲೇ ಹಿರಿಯ ಅಧಿಕಾರಿಗಳು ಅಲ್ಲಿದ್ದ ನಿರ್ವಹಣಾ ಅಧಿಕಾರಿಗೆ ತರಾಟೆ ತೆಗೆದು ಊಟದ ಕಮಿಟಿ ರಚಿಸಿ ಊಟದ ವ್ಯವಸ್ಥೆಯನ್ನೇ ಬದಲಾಯಿಸಿದರು. ಇಡೀ ಜೈಲಿಗೆ ಸುಖ ಸಂಪನ್ನವಾಗಿ ಒಬ್ಬರಿಗೆ ಬರೀ 8 ರೂಪಾಯಿ ಖರ್ಚು ಮಾಡಿದರೆ ಆಗುತ್ತಿತ್ತು. ಜೈಲಿನಲ್ಲಿದ್ದವರಿಗೆ ಹೊರಗಡೆಯ ತುರ್ತು ಪರಿಸ್ಥಿತಿಗಿಂತ ಒಳಗಿನ ಸುಖ ಸಂಪನ್ನ ಭೋಜನ ಸಿಗುತ್ತಿದ್ದ ಜೈಲೇ ಆರಾಮೆನಿಸತೊಡಗಿತು.
ಹೀಗೆ ಈ ವ್ಯವಸ್ಥೆ ಸರಿಯಾದ ನಂತರ ಮತ್ತದಿನೈದು ದಿನ ಕಳೆದು ಅಷ್ಟರಲ್ಲಿ ಪರಿಚಯವಾಗಿದ್ದ ಜೈಲಿನ ನಿರ್ವಹಣಾ ಅಧಿಕಾರಿಯನ್ನು ಮಾತನಾಡಿಸಿ ತುರ್ತು ಪರಿಸ್ಥಿತಿಗೆ ಸಂಬಂಧವಿಲ್ಲದ ಅಂದರೆ ಅಲ್ಲಿ ನಿಜವಾದ ಖೈದಿಗಳನ್ನ ಭೇಟಿ ಮಾಡುವ ಸಲುವಾಗಿ ಕೇಳಿಕೊಂಡಾಗ, ಅಲ್ಲಿದ್ದವರೆಲ್ಲ ಬಹಳ ಎಚ್ಚರ ಕೊಟ್ಟರು. ಶಾನುಭಾಗರೇ ಒಳಗೆ ಹೋಗಿ ಏಕೆ ಮೇಲೆ ಮುಳ್ಳು ಎಳೆದುಕೊಳ್ಳುವಿರಿ, ಅಲ್ಲಿರುವವರು ಕ್ರಿಮಿನಲ್ ಗಳು, ನಿಮಗೆ ಹೆಚ್ಚು ಕಡಿಮೆಯಾದರೆ ತೊಂದರೆಯಾದೀತು ಎಂದೆಲ್ಲ ನುಡಿದರು. ಇವರಿಗೆ ಮೊದಲಿನಿಂದಲೂ ಸ್ವಲ್ಪ ಸಂಶೋಧನಾ ಮನೋಭಾವ ಆದ್ದರಿಂದ ಆದದ್ದಾಗಲಿ ಎಂದು ಒಳಗೆ ನುಗ್ಗಿದರು. ಒಳಗೆ ಹೋಗಿ ಇವರು ಎಲ್ಲರಿಗೂ ಕೇಳಿದ್ದು ಒಂದೇ ಪ್ರಶ್ನೆ, ನೀವು ಇಲ್ಲಿಗೆ ಏಕೆ ಬಂದದ್ದು ಎಂದು. ಅವರು ಎಲ್ಲರನ್ನು ಕೇಳಿ ಅಳೆದ ಮೇಲೆ ತಿಳಿದಿದ್ದೇನೆಂದರೆ ಅಲ್ಲಿದ್ದ ಖೈದಿಗಳ ಪೈಕಿ 100 ಕ್ಕೆ 5 ಜನ ಮಾತ್ರ ಹುಟ್ಟು ಅಪರಾಧಿಗಳೆನ್ನಬಹುದು ಮಿಕ್ಕ 95 ಜನ ತಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳಲಾಗದೆ ಮಾಡಿದ ಅಪರಾಧದಿಂದ ಒಳ ಬಂದವರು. ಕಾನೂನು ತಿಳಿಯದೆ, ಅನ್ಯಾಯವನ್ನು ತಡೆಯಲಾಗದೆ ಮತ್ತು ಅವಮಾನವನ್ನು ಸಹಿಸಿಕೊಳ್ಳಲಾಗದೆ, ಪ್ರಸ್ತುತ ವ್ಯವಸ್ಥೆಯಲ್ಲಿ ನ್ಯಾಯ ಪಡೆಯಲಾಗದೆ, ಕೋರ್ಟ್ ಕಛೇರಿಗಳ ಅಲೆಯಲಾಗದೆ ಕಾನೂನನ್ನು ಇವರೇ ಕೈಗೆ ತೆಗೆದುಕೊಂಡು ಖೈದಿಗಳಾದವರು. ಇವರು ಒಳಗೆ ಹೋದಾಗ ಸಾಮಾನ್ಯವಾಗಿ ಎಲ್ಲರೂ ಮಾತನಾಡಿದ್ದರು ಆದರೆ ವಿಠ್ಠಲ (ನನಗೆ ಹೆಸರು ಮರೆತಿದೆ) ಎಂಬ ವ್ಯಕ್ತಿ ಮಾತ್ರ ಇವರ ಬಳಿ ಮಾತನಾಡಿದ್ದು ಅಷ್ಟಕ್ಕಷ್ಟೇ. ಆದ್ದರಿಂದ ಶಾನುಭಾಗರು ಬೇರೆಯವರನ್ನು ಕೇಳಿ ತಿಳಿದಾಗ ಗೊತ್ತಾದದ್ದು ಅವನು ಸ್ವಲ್ಪ ಹಾಗೆಯೇ ಮೂರ್ನಾಲ್ಕು ದಿನಗಳ ಮೇಲೆ ಸರಿ ಹೋಗುವವನೆಂದು ಎಲ್ಲರೂ ತಿಳಿಸಿದರು. ಹಾಗೆಯೇ ಮೂರ್ನಾಲ್ಕು ದಿನಗಳ ನಂತರ ವಿಠಲ ಮಾತನಾಡತೊಡಗಿದ. ವಿಠಲ ಜೈಲಿಗೆ ಬಂದು ಎಷ್ಟು ವರ್ಷವಾಯಿತೆಂದು ಅವನಿಗೂ ಮರೆತು ಹೋಗಿತ್ತು ಬೇರೆಯವರಿಗೂ ತಿಳಿದಿರಲಿಲ್ಲ. ವಿಠಲ ಒಂದಿನ ಕಾಸರಗೋಡಿನಿಂದ ರೈಲು ಹತ್ತಿದ್ದ, ಟಿಕೆಟ್ ಪಡೆಯಲು ಕೈಲಿ ಹಣವಿರಲಿಲ್ಲ. ಆಗ ರೈಲ್ವೆ ಟಿಕೆಟ್ ಕಲೆಕ್ಟರ್ ಬಂದು ಇವನ ಬಳಿ ಹಣ ಇದಿಯೋ ಇಲ್ಲವೋ ತಿಳಿಯದೆಯೇ ಇವನ ಹೆಸರಲ್ಲಿ ಟಿಕೆಟ್ ಹರಿದೆ ಬಿಟ್ಟರು. ಇವನ ಬಳಿ ಒಂದು ಬಿಡಿಗಾಸು ಇಲ್ಲ, ಆದರೆ ಟಿಕೆಟ್ ಹರಿದ್ದದ್ದಾಗಿದೆ ಎಂದು ಇವನನ್ನು ಅಲ್ಲಿಯ ರೈಲ್ವೆ ಪೊಲೀಸ್ ಗೆ ಒಪ್ಪಿಸಿ ಮುನ್ನೆಡೆದರು. ಅಂದಿನ ರೈಲ್ವೆ ಪೊಲೀಸ್ ಗು ಇವನ ಜೊತೆ ಏನು ಮಾಡಬೇಕಂದು ತಿಳಿಯದೆ ಸಿವಿಲ್ ಪೊಲೀಸ್ ಗೆ ಒಪ್ಪಿಸಿದರು. ಸಿವಿಲ್ ಪೊಲೀಸ್ ಗು ಏನು ಮಾಡಬೇಕೆಂದು ತೋಚದೇ ನೇರ ವಿಠಲನನ್ನು ಕಳಿಸಿದ್ದು ಗೆಸ್ಟ್ ಹೌಸ್ ಗೆ (ಜೈಲು). ಅವ ಅಂದು ಜೈಲು ಸೇರಿದ್ದು ಬಿಟ್ಟರೆ, ಯಾವ ಮ್ಯಾಜಿಸ್ಟ್ರೇಟ್ ಎಂದಿಗೂ ಜೈಲಿನ ಖೈದಿಗಳ ವಿಚಾರಿಸಲಿಲ್ಲ, ಯಾವ ಪೊಲೀಸ್ ಅಧಿಕಾರಿಯು ಇವನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರಿ ಪಡಿಸಲಿಲ್ಲ , ಅಲ್ಲಿಂದ 8 ವರ್ಷ ಆಯ್ತೋ 10 ವರ್ಷ ಆಯ್ತೋ ಅವನಿಗೂ ಗೊತ್ತಾಗ್ಲಿಲ್ಲ, ಬೆರೆಯವ್ರು ತಲೆ ಕೆಡಿಸ್ಕೊಲಿಲ್ಲ. ಇದನ್ನೆಲ್ಲ ಕೇಳಿ ಶಾನುಭಾಗರು ದಂಗಾದರು. ಸರಿ ಎಂದು ಸ್ವಲ್ಪ ದಿನಗಳ ನಂತರ ಅಲ್ಲಿದ್ದ ತುರ್ತು ಪರಿಸ್ಥಿತಿಗೆಂದು ಅರೆಸ್ಟ್ ಆಗಿದ್ದವರನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಿಪಡಿಸಿದಾಗ ಶಾನುಭಾಗರ ಸರದಿಯೂ ಬಂತು. ಮ್ಯಾಜಿಸ್ಟ್ರೇಟರು "ಏಕಪ್ಪ ನಿ ಯಂತಕ್ಕೆ ಜೈಲಿಗೆ ಬಂದಿದ್ದು" ಎಂದು ಕೇಳಿದಾಗ "ಸಾರ್ ಕಾಲೇಜಿನಲ್ಲಿ ಒಂದು ಗಲಾಟೆಯಾಗಿದೆ. ಆದ್ದರಿಂದ ನನ್ನನ್ನು ಮಂಗಳೂರಿನ ಪೊಲೀಸ್ ಠಾಣೆಗೆ ಕರೆತರಲಾಗಿತ್ತು, ಅದಕ್ಕೆ ನನ್ನ ಸಂಭದವಿಲ್ಲ ಎಂದು ತಿಳಿದ ಮೇಲೆ, ಬಾಂಡ್ ಸಹಿ ಮಾಡಲು ಹೇಳಿದರು. ಅದರಲ್ಲಿ "hence forth I will not involve in anti national activities" ಎಂದಿತ್ತು ಆದ್ದರಿಂದ ಸಹಿ ಮಾಡಲಿಲ್ಲ. ಮ್ಯಾಜಿಸ್ಟ್ರೇಟರು ಪೊಲೀಸರನ್ನೊಮ್ಮೆ ದಿಟ್ಟಿಸಿ, ಇವರನ್ನು ಈ ಕೂಡಲೇ ಬಿಟ್ಟು ಕಳಿಸಿ ಎಂದು ಆಜ್ಞಾಪಿಸಿದರು. ಮತ್ತು ಶಾನುಭಾಗರಿಗೆ ನೀವು ಈ ಕೂಡಲೇ ಹೊರಡಬಹುದು ಎಂದು ತಿಳಿಸಿ ನಿಮಗೆ ಸಂಬಂಧಪಟ್ಟ ವಸ್ತುಗಳು ನಿಮ್ಮ ಮನೆ ತಲುಪುತ್ತವೆ ಎಂದು ತಿಳಿಸಿದರು.
ಶಾನುಭಾಗರು ಹೊರಡುವ ಮುಂಚೆ ಎರಡು ನಿಮಿಷ ಸಮಯ ಕೇಳಿದರು. ಮ್ಯಾಜಿಸ್ಟ್ರೇಟರು ಇವರ ಮುಖವೊನ್ನೊಮ್ಮೆ ನೋಡಿ ಸರಿ ಎಂದರು. " ಸಾರ್ ಇದೆ ಜೈಲಿನಲ್ಲಿ ವಿಠ್ಠಲ ಎಂಬುವನಿದ್ದಾನೆ" ಎಂದು ಶುರು ಮಾಡಿ ಪಟಪಟನೆ ಅವನ ಕಥೆಯನ್ನು ಇವರ ಮುಂದೆ ಹೇಳಿದರು. ಆ ಕೂಡಲೇ ಮ್ಯಾಜಿಸ್ಟ್ರೇಟರು ವಿಠ್ಠಲನನ್ನ ಬಿಡುಗಡೆಗೊಳಿಸಿದರು. ಆದರೆ ಹೊರಡುವ ಮುನ್ನ ಶಾನುಭಾಗರಿಗೆ ಇವರ ಕೊಠಡಿಯಲ್ಲಿ ಕೂರಲು ಹೇಳಿದರು. ಇವರು ಎಲ್ಲ ಸರಿ ಹೋಯಿತೆನ್ನುವಾಗ ಮ್ಯಾಜಿಸ್ಟ್ರೇಟರು ಒಳಗೆ ಬಂದು ಹೇಳಿದ್ದು ಪೊಲೀಸ್ ನಿಮ್ಮ ಮೇಲೆ ಮತ್ತೊಂದು ಕೇಸ್ ಹಾಕುವ ಸಂಭವವಿದೆ, ನಡೆಯಿರಿ ನನ್ನ ಜೊತೆ ಎಂದು ಅವರ ಕಾರಿನಲ್ಲೇ ಹತ್ತಿಸಿಕೊಂಡು ಮಾರು ದೂರ ಕೊಂಡೊಯ್ದು ಶಾನುಭಾಗ್ ಸರ್ ರವರನ್ನು ಸುರಕ್ಷಿತವಾಗಿ ಕಳಿಸಿಕೊಟ್ಟಾಗ,ಶಾನುಭಾಗ್ ಸರ್ ತೀರ್ಮಾನ ಮಾಡಿದ್ದು ಇಂದಿಗೆ ಇದೆ ಕೊನೆ ನಾನೆಂದಿಗೂ ಈ ಜೈಲು ಮೆಟ್ಟಿಲು ಹತ್ತುವಂತಿಲ್ಲ, ಮತ್ತೆ ನನ್ನಂತ ಸಾವಿರಾರು ಮಂದಿಗೆ ಜೈಲು ಹತ್ತಲು ಬಿಡುವುದಿಲ್ಲ. ಅದು ಕಾನೂನು ಡಿಗ್ರಿ ಪಡೆದಾದರೂ ಸರಿ ಅಥವಾ ಭಾರತದ ಸಂವಿಧಾನದಲ್ಲಿರುವ ಪ್ರಜೆ ಎಂಬ ಅತ್ಯುನ್ನತ ಪದವಿಗಿರುವ ಅರ್ಹತೆಗಳನ್ನು ಉಪಯೋಗಿಸಿಕೊಂಡಾದರು. ಅಲ್ಲಿಂದ ಇವರ ಸಂಸ್ಥೆ ಒಂದು ಪೈಸಾವಿಲ್ಲದೆ ಬಗೆಹರಿಸುವ ಕೇಸುಗಳ ಸಂಖ್ಯೆ ಅಂದಾಜು 36 ಸಾವಿರಕ್ಕಿಂತ ಹೆಚ್ಚು. ಮತ್ತೊಮ್ಮೆ ಓದಿ 36 ಸಾವಿರ !!!! ಅಕ್ಕು ಲೀಲಾ ಕೇಸ್, ಸೌದಿ ಅರೇಬಿಯಾ ಕೇಸ್ಗಳು, ಲೆಬಾನಿಸ್ ಪ್ರೆಸಿಡೆಂಟ್ ಕೇಸ್, ಫಾರೆಸ್ಟ್ ಗಾರ್ಡ್ ಕೇಸ್ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ ಕಾರಣ ಇಂದಿಗೂ 40 ರಿಂದ 50 ಕೇಸ್ ಬರುತ್ತಲೇ ಇವೆ.
ನಾನು ಅಲ್ಲಿ ಕೇಳಿ ಇಲ್ಲಿ ಬರೆಯುತ್ತಿರುವುದರಿಂದ ವಿಷಯವನ್ನ ಅವರಷ್ಟು ತೀವ್ರವಾಗಿ ಮತ್ತು ಖಚಿತವಾಗಿ ಹೇಳಲಾಗುತ್ತಿಲ್ಲ. ಈ ಎಲ್ಲ ಕಥೆಗಳನ್ನ ಹೇಳಿ ಕೊನೆಗೆ ನಮಗೊಂದು ಪ್ರಶ್ನೆ ಕೇಳಿದರು "ಇದೆಲ್ಲಾ ಕೇಳಿ ನಿಮಗೆಲ್ಲ ರಕ್ತ ಕುದಿಯುತ್ತಿದಿಯಾ??" ಅಲ್ಲಿ ಕುಳಿತಿದ್ದವರೆಲ್ಲ ಒಕ್ಕರಲಿನಿಂದ ಹೇಳಿದರು "ಹೌದು ಸರ್" ಶಾನುಭಾಗ್ ಸರ್ ಮತ್ತೆ ಕೇಳಿದ್ರು "ಹಾಗಾದ್ರೆ ಎನ್ ಮಾಡ್ಬೇಕಂತಿದಿರಿ??" ಎನ್ ಮಾಡೋದು ಅಂತ ಎಲ್ಲ ಮುಖ ಮುಖ ನೋಡ್ಕೊಂಡ್ರು. ಶಾನುಭಾಗ್ ಸರ್ ಮತ್ತೆ ಹೇಳಿದ್ರು -"ಎನ್ ಮಾಡ್ಬೇಕುಂತಾ ನಾ ಹೇಳ್ಕೊಡ್ತೀನಿ, ಆದ್ರೆ ನನ್ನ ಆತಿಥ್ಯ ಸ್ವೀಕರಿಸಲು ಉಡುಪಿಗೆ ಬನ್ನಿ. ಇಲ್ಲಿ ನಾ ಯಾರಿಗೂ ಪ್ಲೀಸ್ ಬನ್ನಿ ಅಂತ ಕೇಳೋಲ್ಲ. ನಾವು ಶುರು ಮಾಡಿದಾಗ 32 ಜನರಿದ್ವಿ, 31 ಜನರು ಹೋಗಿ ಆಯ್ತು ಇನ್ನ ನಾ ಒಬ್ಬ ಉಳಿದಿರೋದು. ಕಷ್ಟ ಇದೆ , ಕೆಲವು ರಾಜಕಾರಣಿಗಳು ಎಂಡೋಸಲ್ಫಾನ್ ಕೇಸ್ ನಲ್ಲಿ ನನ್ನ ಗಡಿಪಾರು ಮಾಡ್ತೇನೆ ಅಂತ ಬೆದರಿಕೆ ಒಡ್ಡಿದ್ದುಂಟು ಆದರೆ ಜನ ಸಾಮಾನ್ಯರ ಸಮಸ್ಯೆ ಬಗೆಹರಿಸಿದಾಗ ಬರೋ ಸಮಾಧಾನದ ಮುಂದೆ ಯಾವುದೂ ಇಲ್ಲ. I have enjoyed my life and all I wanted is to tell you how I enjoyed it. If you want to experience such an enjoyment , you can join in as a volunteer." ಅಂತ ಹೇಳಿ ಮತ್ತೆ ನಮ್ಮಲ್ಲಿ vote of thanks , ಸ್ವಾಗತ ಭಾಷಣ ಎಲ್ಲ ಮಾಡೋಲ್ಲ , ಸಾಧ್ಯ ಆದ್ರೆ ಮತ್ತೆ ಸಿಗೋಣ” ಅಂತ ಹೇಳಿ ಮುಗ್ಸಿದ್ರು.
ಇತ್ತೀಚೆಗೆ ವಾರಾಂತ್ಯದಲ್ಲಿ ಊರು ಸೇರಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಕೃಷಿಯಲ್ಲಿ ಸಂತಸವಿರುವುದು ಸಹಜ ಜೊತೆಗೆ ಅದರಲ್ಲಿನ ಕಷ್ಟಗಳ ನೆನೆದರೆ ಮೈ ಬೆವರುತ್ತದೆ. ಆದರೆ 60 ರ ಹರೆಯದ ನನ್ನ ತಂದೆ ಹೊಲದಲ್ಲಿ ಅಂಗಿ ತೆಗೆದು ಮೈ ಬೆವರಿಳಿಸಿ ಕೆಲಸ ಮಾಡುವುದನ್ನ ನೋಡಿದರೆ ಎಂತ ಸೋಮಾರಿಗಳಿಗೂ ಕೆಲಸ ಮಾಡಲು ಮನಸ್ಸಾಗಿ ಬಿಡುವುದರಲ್ಲಿ ಎರಡು ಮಾತಿಲ್ಲ. ಇಷ್ಟೆಲ್ಲ ಯೋಚಿಸಿದರು ಕಳೆದ ಭಾನುವಾರ ಹೆಂಡತಿಯ ಒತ್ತಾಯದ ಮೇರೆಗೆ ಬೆಂಗಳೂರಿನಲ್ಲೇ ಉಳಿಯಬೇಕಾಯಿತು. ಅವಳ ಸ್ನೇಹಿತರೊಬ್ಬರು ಭಾನುವಾರ ಸಂಸ್ಕೃತಿ ಭವನದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಹೋಗಲೇಬೇಕೆಂದು ತಿಳಿಸಿದ್ದರಿಂದ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಬೇಕೆಂಬುದು ಅವಳ ಇಚ್ಛೆಯಾಗಿತ್ತು.
ಇವೆಲ್ಲ ಯೋಚಿಸುತ್ತಾ ರಾತ್ರಿ ಮಲಗಿದ್ದು ತಡವಾದ ಕಾರಣ ಭಾನುವಾರ ಬೆಳಿಗ್ಗೆ ತಡವಾಗಿ ಎದ್ದು ಗಡಿಬಿಡಿಯಿಂದ ಕಾರು ಚಲಾಯಿಸುತ್ತಾ ಮಲ್ಲೇಶ್ವರಂ ಕಡೆಗೆ ನುಗ್ಗಿದೆವು. ಸಂಸ್ಕೃತಿ ಭವನದ ಮೆಟ್ಟಿಲತ್ತಿದ ಮೊದಲೇ ಕಂಡದ್ದು ಕುಸುಮಬಾಲೆಯವರನ್ನು. ಬಹಳ ದಿನದಿಂದ ಸಹನಾಳ ಮುಖಾಂತರ ಇವರ ಬರಹಗಳನ್ನು ಓದುತ್ತಿದ್ದು ಇಂದಿಗೆ ಅವರ ವಿಜಯ ಕರ್ನಾಟಕದ ಕ್ರಾಸ್ ಕನೆಕ್ಷನ್ ಅಂಕಣದ ರೆಗ್ಯುಲರ್ ಓದಿಗ. ಮೂರ್ನಾಲ್ಕು ಬಾರಿ ಅವರ ಅಂಕಣದ ಕೆಳಗೆ ಕಮೆಂಟಿಸಿ ಅವರೊಡನೆ ಚರ್ಚಿಸಿದ್ದು ಇದೆ. ಸಹನಾ ಹೇಳಿದ್ದು ನಾವು ಡಾ . ರವೀಂದ್ರ ಶಾನುಭಾಗ್ ಅವರ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ಎಂದಾದರೂ ನಾ ಬಂದದ್ದು ಕುಸುಮಕ್ಕನ ಜೊತೆ ಎರಡು ಮಾತನಾಡಿ ಹೋಗಲೆಂದು. ಕುಸುಮಕ್ಕನವರ ಜೊತೆ ಮಾತನಾಡಿ ಹೋಗುವುದೇನೋ ಸರಿ ಆದರೆ ನನ್ನ ನಾಚಿಕೆಗೇಡಿನ ಜನ್ಮಕ್ಕಿಷ್ಟು ನನಗೆ ಡಾ. ರವೀಂದ್ರ ಶಾನುಭಾಗ್ ಯಾರೆಂದೇ ಗೊತ್ತಿರಲಿಲ್ಲವೆಂಬುದರ ಕಾರಣ ನಾನಿಂದು ಈ ಮಹಾನುಭವನವರನ್ನು ಕಂಡು ಕೇಳಲು ಬಂದಿರುವ ಅವಕಾಶದ ಮಹತ್ವವೇ ತಿಳಿದಿರಲಿಲ್ಲ. ಸರಿ, ಕುಸುಮಕ್ಕನವರಿಗೇನೋ ಕಂಡು ನಮಸ್ಕರಿಸಿದೆ ಆದರೆ ಅವರ ಜೊತೆ ನಾನು ಸಂವಾದ ಮಾಡಲು ತಂದಿದ್ದ ಮೂರ್ನಾಲ್ಕು ವಿಷಯಗಳನ್ನು ತೆಗಡಿದಲು ಧ್ಯೇರ್ಯವೇ ಬರಲಿಲ್ಲ. ಈ ನನ್ನ ಪುಕ್ಕಲ ಮನಸನ್ನ ಶಪಿಸುತ್ತಾ ಒಳಗಡೆ ಹೋಗಿ ಕುಳಿತೆ. ಸಮಾನ ವಯಸ್ಸಿನವರಾರು ಕಾಣಲಿಲ್ಲ. ಎಲ್ಲ ಹಿರಿಯರು, ಸಾಧನೆಯ ವರ್ಚಸ್ಸು ಮುಖದಲ್ಲಿ ಎದ್ದು ಕಾಣುತ್ತಿತ್ತು ಆದರೂ ಅಲ್ಲಿರುವವರಿಗಿಂತ ಸಾಮಾನ್ಯ ಜನರು ಮತ್ತೆಲ್ಲೂ ಕಾಣುವುದಿಲ್ಲವೇನೋ ಅನ್ನುವಷ್ಟು ಸರಳರು ಅಲ್ಲಿ ಕುಳಿತಿದ್ದರು. ಅಲ್ಲೇ ಇದ್ದ ( ಪಂಚೆ )ಲುಂಗಿಯೊಂದನ್ನು ಗೋಡೆಗೆ ಅಂಟಿಸಿ ಅದನ್ನೇ ಪ್ರೊಜೆಕ್ಟರ್ ಸ್ಕ್ರೀನ್ ಮಾಡಿದ್ದರು. ಇಬ್ಬರು ಹಿರಿಯರು ಕಿಟಕಿಗೆಲ್ಲ ಬಟ್ಟೆ ಮುಚ್ಚಿ ಕತ್ತಲು ಬರಿಸಲು ಪ್ರಯತ್ನಿಸಿದ್ದರು. ಏನೂ ತಿಳಿಯದೆ ಮಂಕು ಬಡಿದು ಕೂತಿದ್ದವನಿಗೆ ಮತ್ತೆ ಏನೋ ಹೊಳೆದಂತಾಗಿ ಆ ಹಿರಿಯರ ಕೈ ಜೋಡಿಸಿ ಏಣಿ ಹತ್ತಿ ಕಿಟಕಿಗಳನ್ನ ಮುಚ್ಚಿದೆ. 10.30 ಕ್ಕೆ ಕಾರ್ಯಕ್ರಮ ಶುರುವಾಗಬೇಕಿದ್ದು ಎಲ್ಲ ಜನರ ಆಗಮನದಿಂದ ತಡವಾಯಿತು. ಮತ್ತರ್ಧ ಘಂಟೆಯಲ್ಲಿ ಬರಬೇಕಾದವರೆಲ್ಲ ಬಂದು ಸೇರಿದರು. ಆಗ ಕಂಡೆ ನನ್ನ ವಯಸ್ಸಿನವರು, ನನಗಿಂತ ಚಿಕ್ಕವರು, ರಾಜ್ಯ ಸರ್ಕಾರದ ಕೆಲಸ ಮಾಡಿ ನಿವೃತ್ತ ಹೊಂದಿದವರು, ಗೃಹಿಣಿಯರು, ಪತ್ರಕರ್ತರು, ರಾಜ್ಯ ಪ್ರಶಸ್ತಿ ಕಮಿಟಿಯವರು, ಯುವಕರು, ಯುವತಿಯರು, ಸಿನಿಮಾ ರಂಗದವರು , ವಿದ್ಯಾರ್ಥಿಗಳು ಉತ್ಸಾಹದಿಂದ ಕುಳಿತು ಸುಮಾರು ಅರವತ್ತೈದರ ಪ್ರಾಯದ ಉತ್ಸಾಹಿ ಯುವಕರೊಬ್ಬರನ್ನ ದಿಟ್ಟಿಸುತ್ತಿದ್ದರು. ಎರಡು ಕ್ಷಣದಲ್ಲಿ ಅವರೇ ಡಾ ರವೀಂದ್ರ ಶಾನುಭಾಗ್ ಎಂದು ತಿಳಿದೆ. ಒಂದು ಪ್ಲಾಸ್ಟಿಕ್ ಕುರ್ಚಿ ಒಂದು ಮೈಕು ಮತ್ತೊಂದು ಪ್ರೊಜೆಕ್ಟರ್ ಬಿಟ್ಟರೆ ಸಂಜೆವರೆಗೂ ಮೋಡಿ ಮಾಡಿದ್ದು ಡಾ ರವೀಂದ್ರ ಶಾನುಭೋಗ್ ಅವರ ಮಾತುಗಳು. ಸ್ವಾಗತ ಭಾಷಣವಿಲ್ಲದೆ ಶುರು ಮಾಡಿದ ಅವರು, ಅವರ ಜೀವನವನ್ನ ಹಂಚಿಕೊಂಡಾಗ ಬದುಕಿದರೆ ಇಂಥಹ ಬದುಕು ಬದುಕಬೇಕೆನಿಸಿತು.

ಸಿನಿಮಾಗಳಲ್ಲಿ ನಾಯಕರನ್ನ ನೋಡಿ ಚಪ್ಪಾಳೆ ತಟ್ಟಿದ್ದಿದೆ ಆದರೆ ಶಾನುಭಾಗ್ ಸರ್ ರವರನ್ನ ನೋಡಿ ಚಪ್ಪಾಳೆ ತಟ್ಟುವುದಕ್ಕಿಂತ ಆದದ್ದು ಭಾವನೆಗಳು ಉಕ್ಕಿ ಕಣ್ಣಲ್ಲಿ ನೀರು ಬಂದು ಇವರನ್ನ ನೋಡಿದ ಸಾರ್ಥಕ ಭಾವನೆ ಬಂದಂತ ಅನುಭವ ಮತ್ತೆ ಜೀವನದಲ್ಲಿ ಇಂತಹ ಹತ್ತು ಕೆಲಸವಾದರೂ ಮಾಡಿ ಸಾಯಬೇಕೆಂಬ ನಿಶ್ಚಯ. ಮಾತಿನಲ್ಲಿ ಹೇಳುವುದಕ್ಕಿಂತ ನಾಲ್ಕೈದು ಬಗೆಹರಿಸಿದ ಕೇಸ್ ಗಳನ್ನ ಹೇಳುತ್ತೇನೆ ಎಂದು ಶುರು ಮಾಡಿ ಹೇಳುತ್ತಾ ಹೋದಂತೆ ಶಾನುಭಾಗ್ ಸರ್ ರವರ ಸಾಹಸಕ್ಕೆ ಚಪ್ಪಾಳೆ ತಟ್ಟುವುದೋ ಅಥವಾ ಸರ್ಕಾರದ ಅಧಿಕಾರಿಗಳು ರಾಜಕಾರಣಿಗಳು ಮಾಡಿದ ಆಲಸ್ಯಕ್ಕೆ ತಲೆ ಚಚ್ಚಿಕೊಳ್ಳುವುದೋ ತಿಳಿಯದೆ ಅವರ ಅನುಭವ ಕಥನ ಕೇಳುತ್ತಾ ನಮ್ಮ ಯೋಚನಾ ಲಹರಿ ಬೇರೆಯೇ ಒಂದು ಲೋಕಕ್ಕೆ ಹರಿದಿತ್ತು. ರಕ್ತ ಕುದ್ದಾಗ ಏನು ಮಾಡಬೇಕೆಂದು ತಿಳಿಯಲು ಡಾ. ರವೀಂದ್ರ ಶಾನುಭಾಗ್ ಸರ್ ರವರು ನಿರೂಪಿಸಿರುವ ಮೆಥಡಾಲಾಜಿ ತಿಳಿಯಬೇಕೆಂಬ ಹಂಬಲವಿದೆ. ಸದ್ಯಕ್ಕೆ ಸ್ವಲ್ಪ ಮುಂಚೆಯೇ ಅಂದುಕೊಂಡಿದ್ದ ಕೆಲಸಗಳಲ್ಲಿ ಸಿಲುಕಿದ್ದೇನೆ. ಸಾಧ್ಯವಾದಷ್ಟು ಬೇಗ ಇವರ ಮಾರ್ಗದರ್ಶನ ಪಡೆದೇ ಪಡೆಯುವೆ ಮತ್ತು ನಿಮ್ಮಲ್ಲರಿಗೂ ಸಾಧ್ಯವಾದರೆ ಅವರ ಇಂತಹ ಒಂದು ಸೆಷನ್ ಗೆ ಹೋಗಿ ಬನ್ನಿ ಎಂದು ವಿನಂತಿಸುತ್ತೇನೆ. ಇಲ್ಲಿಯವರೆಗೂ ಯಾರಾದರೂ ಓದಿದ್ದರೆ ತಮಗೊಂದು ಧನ್ಯವಾದ. ಮತ್ತೆ ಸಿಗೋಣ.
-ಪುಟ್ಟಾರಾಧ್ಯ ಸಿದ್ದರಾಜ್
-ಪುಟ್ಟಾರಾಧ್ಯ ಸಿದ್ದರಾಜ್

Puttanna... Athyuttama lekhana... Nimma yella blog gallannu odi, nimma alochane galige, nimma baraha galige tale thoogiddene... Nijavagalu nimige nanna namana
ReplyDeleteಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆ...🙏🙏 ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಅನ್ಯಾಯದ ವಿರುದ್ಧ ನ್ಯಾಯಯುತವಾಗಿ ನ್ಯಾಯ ದೊರಕಿಸಿಕೊಡುವುತ್ತಿರುವ ಡಾ ರವೀಂದ್ರ ಶಾನುಭಾಗ್ ರವರಿಗೆ ಅಭಿನಂದನೆಗಳು...🙏ಇಂತ ಮಹಾ ಸಾದಕರ ಸಾಧನೆಯ ಬಗ್ಗೆ ತಿಳಿಸಿದ್ದಕ್ಕೇ ಪುಟ್ಟಾರಾಧ್ಯ ರವರಿಗೆ ವಂದನೆಗಳು.
ReplyDelete