Tuesday, 5 April 2016

ಡೆನ್ನಾನ ಡೆನ್ನಾನ ಮಿಸ್ ಮಾಡ್ಕೊಬೇಡ್ರಾಣ್ಣಾ !!!

ಮೂರು ದಿನಗಳಿಂದ ತಲೇಲಿ ಬರೀ ಡೆನ್ನಾನ ಡೆನ್ನಾನಇದೇನಪ್ಪಾ ಹಿಂಗಾಯ್ತಲ್ಲ ಅಂತ ಯೋಚ್ನೆ ಮಾಡ್ತಾ ಇದ್ದಾಗ  ಅದ್ಬುತ ಚಿತ್ರದ ತುಣುಕುಗಳು ಕಣ್ಮುಂದೆ ಹಾಯ್ದು ಹೋಗುತ್ತಿದ್ದವುಇತ್ತೀಚಿಗೆ ತಲೆಗೆ ಬಂದ ಯೋಚನೆಗಳನ್ನು ಸ್ನೇಹಿತರ ಜೊತೆಯೂ ಇಲ್ಲಾ  ಬ್ಲಾಗಿನಲ್ಲೋ ಈಚೆ ಹಾಕದಿದ್ದರೆ ತಲೆ ಹಾಳಾದ ಅನುಭವವಾದಂತಾಗುತ್ತದೆಅದರಲ್ಲೂ  ಬರಹ ಏನಾದರೂ ಒಳ್ಳೆಯ ವಿಷಯ ಹಿಡಿದು ಬರೆಯಬೇಕೆಂಬ ಆಸೆಯಿತ್ತು ಕಾರಣ ಆಕಸ್ಮಾತ್ ಆಗಿ ಬರೆಯಲು ಶುರು ಮಾಡಿದ  ಬ್ಲಾಗ್ ಗೆ ಒಂದು ವರ್ಷ ತುಂಬುತ್ತಿದೆ ಮತ್ತು ಇದು ನನ್ನ ಇಪ್ಪತ್ತೈದನೆಯ ಬರಹಹೀಗೆ ಆಕಸ್ಮಾತ್ ಆಗಿ ಶುರುವಾದದ್ದು ಅಭ್ಯಾಸವಾಗಿಬಿಟ್ಟಿದೆಬರೆಯುವುದೆಲ್ಲ ಚೆನ್ನಾಗಿರದಿದ್ದರೂ ನನ್ನ ಬರಹಗಳಿಗೆ ನನ್ನದೇ ಆದಂತಹ ಓದುಗರು ಹುಟ್ಟಿಕೊಂಡಿರುವುದಂತು   ಸತ್ಯಓದುಗರ ಸಂಖ್ಯೆ ಕಡಿಮೆ ಇರಬಹುದು ಆದರೆ ಓದುವವರಂತು ಇದ್ದಾರೆ ಎನ್ನುವದನ್ನು ನೆನೆದರೆ ಖುಷಿಯಾಗುತ್ತದೆಸರಿ ಬಿಡಿ ವಿಷಯಕ್ಕೆ ಬರೋಣ ಇದೆಲ್ಲ ನಾ ಹೇಳಿದ  ಕಾರಣವೇನೆಂದರೆ ಬಿಡುವಿನ ಸಮಯದಲ್ಲಿ ಇರುವ ಅಭ್ಯಾಸದ ಬಗ್ಗೆ ಇಷ್ಟು ಮೋಹವಿರುವ ನನಗೆ ಹೀಗನ್ನಿಸದರೆನಾ ಹೇಳ ಹೊರಟಿರುವ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗು ಅವರ ಚಿತ್ರದ ಮೇಲಿದ್ದ ಭರವಸೆಗಳು ನಿಜವಾದಾಗ ಆಗುವ ಅನುಭವವೇ ಬೇರೆಅಂತಹ ಪ್ರಾಮಾಣಿಕ ಪ್ರಯತ್ನಕ್ಕೆ ನನ್ನ  ಒಂದು ಪುಟ್ಟ ಬರಹವನ್ನು ಮೀಸಲಿಟ್ಟು ನನ್ನ ಅಭಿನಂದನೆಗಳನ್ನು ಮತ್ತು ಧನ್ಯವಾದಗಳನ್ನು ತೀರಿಸುವ ಮನಸ್ಸಾಯಿತುಇಗೋ ಅನುಪ್ ಭಂಡಾರಿಯವರೇ ನಿಮ್ಮ ಮತ್ತು ನಿಮ್ಮ ಅದ್ಬುತ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಇಪ್ಪತ್ತೈದನೆಯ ಬರಹ ನಿಮ್ಮ ಮತ್ತು ಕನ್ನಡದ ಮ್ಯಾಗ್ನಂ ಓಪಸ್ "ರಂಗಿ ತರಂಗಚಿತ್ರಕ್ಕೆ ಮೀಸಲು.

ಭಂಡಾರಿಯವರೇ ನೀವು ಮಾಡಿದ್ ಕೆಲ್ಸ ಎಂತದು ಅಂದ್ರೆ ಎಷ್ಟೋ ಜನ ಕನ್ನಡ ಸಿನಿಮಾ ನೋಡೋದೆ ಬಿಟ್ಟಿದ್ದೊವ್ರ್ನ ಮತ್ತೆ ಕನ್ನಡ ಸಿನಿಮಾದತ್ತ ಎಳೆ ತಂದಿದ್ದುಕೆಲವು ಚಿತ್ರಗಳು ಪ್ರಯತ್ನ ಅಂತು ಮಾಡಿದ್ವು ಬಿಡಿ, ಹೆಸರಿಸಬೇಕೆಂದರೆ ಪವನ್ ಕುಮಾರ್ ಅವರ ಲುಸಿಯಾರಕ್ಷಿತ್ ಶೆಟ್ಟಿಯವರ ಉಳಿದವರು ಕಂಡಂತೆ ಚಿತ್ರಗಳು ಉಗ್ರಂ ಅಂತಹ ಕಮರ್ಷಿಯಲ್  ಚಿತ್ರಗಳು ಸಹ ಒಳ್ಳೆಯ ಸುದ್ದಿಯನ್ನೇ ಮಾಡಿದ್ದವು ಇವೆಲ್ಲವೂ ಹಾಕಿಕೊಟ್ಟ ಅಡಿಪಾಯಕ್ಕೆ ಈ ನಿಮ್ಮ ರಂಗಿ ತರಂಗ ಚಿತ್ರದಿಂದ ನೀವು ಒಳ್ಳೆಯ ರೂಪವನ್ನೇ ನೀಡಿದ್ದೀರಿಬಾಹುಬಲಿಯಂತಹ ದೊಡ್ಡ ಚಿತ್ರವಿದ್ದರೂ  ನಿಮ್ಮ ರಂಗಿ ತರಂಗ ಚಿತ್ರ ತಲೆಯೆತ್ತಿ ಎದೆ ತಟ್ಟಿ ಮುನ್ನುಗ್ಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯಇದಕ್ಕೆ ಕೆಲವು ಇಂಟರೆಸ್ಟಿಂಗ್ ಕಾರಣಗಳಿವೆಮೊದಲನೆಯ ಮತ್ತು ಮೂಲ ಕಾರಣ -ರಂಗಿ ತರಂಗ ಚಿತ್ರ ಅದ್ಬುತವಾಗಿದೆಇಲ್ಲಿ ಯಾವ ಸ್ಟಾರ್ ಗಳಿಲ್ಲ , ಬರೀ ಒಳ್ಳೆಯ ಕೆಲಸವಿದೆಭಂಡಾರಿಯವರೇ ನೀವು ಅಲ್ಲಲ್ಲಿ ಕಿರುಚಿತ್ರಗಳನ್ನು ಮಾಡಿರುವುದು ನಮಗೆ ಖಂಡಿತ ತಿಳಿದಿರಲಿಲ್ಲ.  ನಿಮ್ಮ  ಬಗ್ಗೆ ತಿಳಿಯಬೇಕೆಂಬ ಆಸಕ್ತಿ ಮೂಡಿದ್ದೆ  ಚಿತ್ರದ ನಂತರಹೀರೋ ಮತ್ತು ಹೀರೋಯಿನ್ ಬಗೆಗಂತೂ ಮೊದಲೇ ಗೊತ್ತಿಲ್ಲ ಬಿಡಿಕೆಲವು ಸಾಂಗ್ ಗಳನ್ನು ಕೇಳಿದಾಗ ಚೆನ್ನಾಗಿವೆ ಎನಿಸಿದ್ದರೂ ಅಷ್ಟಾಗಿ ಕಿವಿ ಕೊಟ್ಟಿರಲಿಲ್ಲಆದರೆ ಚಿತ್ರ ನೋಡಿದ ಮೇಲೆ ನನಗೆ ಪರಿಚಯವಿರುವವರಿಗೆಲ್ಲ ಹೇಳಿದ್ದೇನೆ ಮರೆಯದೆ  ಚಿತ್ರ ನೋಡಲು.ಎಷ್ಟೋ ದಿನಗಳ ನಂತರ ನಾವು ಕೆಲಸ ಮಾಡುವ ಜಾಗದಲ್ಲಿ ಕನ್ನಡ ಚಿತ್ರದ ಬಗೆಗೆ ಮಾತಾಡುವುದನ್ನು ಕೇಳಿ ಖುಷಿಯಾಗುತ್ತಿದೆ.ಬಾಹುಬಲಿಯ ಚಿತ್ರದ ಬಗ್ಗೆ ಯಾರಾದರೂ ಮಾತಾಡಿದಾಗ ನಮ್ಮ ಕನ್ನಡದ ಹುಡುಗರು ತಟ್ಟನೆ ಎದ್ದು "ರೀ ನಮ್ ರಂಗಿ ತರಂಗ ಚಿತ್ರ ನೋಡ್ರಿ , ಯಾವ್ದಕ್ಕೂ ಕಡಿಮೆ ಇಲ್ಲಅಂದಾಗ ಏನೋ ಒಂಥರಾ ಖುಷಿಹಾಗಂತ ಹೇಳಿ ಬಾಹುಬಲಿಯ ಮೇಲೆ ನಮಗೆ ಯಾವುದೇ ದ್ವೇಷವಿಲ್ಲ , ಇಲ್ಲಿ ಎಲ್ಲರೂ ಅದನ್ನು ಅಷ್ಟೇ ಪ್ರೀತಿಯಿಂದ ನೋಡಿ ಪ್ರೋತ್ಸಾಹಿಸಿದ್ದಾರೆ ಆದರೆ ರಂಗಿ ತರಂಗ ಚಿತ್ರವನ್ನು ಮಾತ್ರ ಕೈ ಬಿಟ್ಟಿಲ್ಲಈಗಲೂ ಫುಲ್ ಹೌಸ್ ಓಡುತ್ತಿದೆ ಥಿಯೇಟರ್ ಗಳನ್ನ ಬೇರೆ ಕಡಿಮೆ ಮಾಡಿದ್ದರಿಂದ ಜನ ಟಿಕೆಟ್ ಗಳಿಗೋಸ್ಕರ ಪರದಾಡುತ್ತಿರುವುದು ಕಂಡು ಬರುತ್ತಿದೆನಮ್ ಹುಡುಗ್ರು ನಮ್ ಭಾಷೆ ಬೆಳಿಬೇಕು ಕಣ್ರೀನೀವು ಇನ್ನು  ಚಿತ್ರ ನೋಡಿಲ್ಲ ಅಂದ್ರೆ ಇವತ್ತೇ ಸಮಯ ಮಾಡಿಕೊಂಡು ಹೋಗಿ ಚಿತ್ರ ನೋಡಿ ಬನ್ನಿ.

ಎರಡನೆಯ ಕಾರಣ ಚಿತ್ರದ ಎಲ್ಲ ಟೆಕ್ನಿಷಿಯನ್ ಗಳು ಮಾಡಿರುವ ಉತ್ತಮ ಕೆಲಸಭಂಡಾರಿಯವರೇ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿವೆಮತ್ತೆ ಬ್ಯಾಕ್ ಗ್ರೌಂಡ್ ಮ್ಯುಸಿಕ್ ಅಂತು ಅತ್ಯದ್ಭುತ ಡೆನ್ನಾನ ಡೆನ್ನಾನ ಅಂತು ತಲೆ ತುಂಬ್ಕೊಂಡಿದೆಅಯ್ಯೋ ತಲೆಗೆ ಬರೋದಿರಲಿ ಬಡ್ಡಿ ಮಗಂದು  ಚಿತ್ರದ ಪ್ರಭಾವ ಎಷ್ಟೆಂದರೆ ಎರಡು ದಿನವಾದರೂ ತಲೆಯನ್ನೇ ಬಿಟ್ಟು ಹೋಗುತ್ತಿಲ್ಲಒಂದರ ಹಿಂದೆ ಒಂದು ಅದ್ಬುತ  ಚಿತ್ರಗಳನ್ನು ಮಾಡಿರುವ ನಿರ್ದೇಶಕರೇ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ತವಕದಿಂದ ಕಾಯುತ್ತಿರುತ್ತಾರೆ ಅಂತಹುದರಲ್ಲಿ ನಮ್ಮ ಕನ್ನಡದ ಹುಡುಗರು ಮಾಡಿರುವ  ಅದ್ಬುತ  ಪ್ರಯತ್ನಕ್ಕೆ ನಮ್ಮೆಲ್ಲರ ಜೈಕಾರ ನೀಡಿ ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ
         ಸರಿ ಬಿಡಿ ಚಿತ್ರದ ಕಡೆ ಬರೋಣಶುರುವಾದಾಗಿನಿಂದ ಕೊನೆಯವರೆಗೂ ಚಿತ್ರದ ಒಂದೊಂದು ಎಳೆಯೂ ಅದ್ಬುತವೆನಿಸುತ್ತಾ ಸಾಗುತ್ತದೆಶುರುವಿನಿಂದಲೇ ಸಸ್ಪೆನ್ಸ್ ಹುಟ್ಟು ಹಾಕುತ್ತ ಜನರನ್ನು ಹಿಡಿದಿಡುತ್ತಾ ಮುಂದೆ ಸಾಗುವ  ಚಿತ್ರ ಜನರಿಗೆ ಕುತೂಹಲದ ಮಾತ್ರೆ ತಿನಿಸುತ್ತಾ ಸಾಗುತ್ತದೆಭಂಡಾರಿಯವರು ಚಿತ್ರವನ್ನು ತೆಗೆದುಕೊಂಡು ಹೋಗಿರುವ ರೀತಿ ಮಾತ್ರ ವರ್ಣಿಸಲಾಗದ ಒಂದು ಅನುಭವಚಿತ್ರದಲ್ಲಿ ಬರುವ ಎಲ್ಲ ಪಾತ್ರಗಳ ಮೇಲೆ ಜನರಿಗೆ ಅನುಮಾನ ಮೂಡಲು ಶುರುವಾಗಾತ್ತದೆ  ದರಿದ್ರ ದೆವ್ವ ಮತ್ತೆ ಯಾವಾಗ ಬರುತ್ತದೋ ಎಂದು ಭಯ ಮೂಡಿಸುತ್ತಿರುತ್ತದೆ ಹೀರೋ ಪ್ರತಿ ಸಲ ಬಿಟ್ಟು ಹೋದಾಗ "ಥೂ ಇವ್ನೆಂತವ್ನಪ್ಪ ಮತ್ತೆ ಆಯಮ್ಮನ್ನ ಬಿಟ್ಟು ಎಲ್ಲೋ ಹೋಗ್ತಾವ್ನೆಅನ್ನೋ ಶಬ್ದಗಳು ಪದೇ ಪದೇ ಕೇಳಿ ಬರುತ್ತವೆಅಲ್ಲಲ್ಲೇ ಜನರ ಕೂಗು ಭಯ ಖುಷಿ ಎದ್ದು ಕಾಣುತ್ತಿರುತ್ತದೆಒಟ್ಟಿನಲ್ಲಿ  ಚಿತ್ರ ಮಾತ್ರ ಭಯಾನಕ ಮತ್ತು ಅದ್ಬುತ ಅನುಭವ ಕೊಡುವಲ್ಲಿ ಹಿಂಜರಿಯುವುದಿಲ್ಲಅದರಲ್ಲೂ ನಿರೂಪ್ , ರಾಧಿಕಾ , ಅವಂತಿಕಾ , ಸಾಯಿ ಕುಮಾರ್ ಮತ್ತು  ವಿಲನ್ ಪೋಲಿಸ್ ಅಭಿನಯ ಮಾತ್ರ ನಿಮ್ಮ ಕಣ್ಣು ಕಟ್ಟಿಸುತ್ತದೆಚಿತ್ರ ಮುಗಿದ ಮೇಲೆ ಚಿತ್ರದ ಗುಂಗು ತಲೆಯಲ್ಲೇ ಸುತ್ತುತ್ತಿರುತ್ತದೆ ಚಿತ್ರ ನೀವೇನಾದ್ರು ನೋಡಿಲ್ಲ ಅಂದ್ರೆ ಪಕ್ಕಾ ಮಿಸ್ ಮಾಡ್ಕೊಳೊದಂತು ಗ್ಯಾರಂಟಿಜಾಸ್ತಿ ಯೋಚ್ನೆ ಮಾಡಿಲ್ದೆ ಮಿಸ್ ಇಲ್ದಂಗೆ  ನೋಡ್ಕೊಂಡು ಬಂದು ಎಲ್ರುಗೂ ನೋಡೋಕೇಳಿಸರಿ ನೀವು ಹೋಗಿ ಚಿತ್ರ ನೋಡ್ಕೊಂಡ್ ಬನ್ನಿ ನಾ ಈವಾಗ ಫುಲ್ ಡೆನ್ನಾನ ಡೆನ್ನಾನ.

No comments:

Post a Comment