"ಏನ್ ಬೆಂಗ್ಳೂರ್ ಸಿದ್ರಾಜಣ್ಣ, ಕೈಲಿ ಕಾಸಿದ್ರೆ ಹೆಣನೂ ಬಾಯಿ ಬಿಡ್ಸ್ಬಹುದು, ಇಲ್ಲಾಂದ್ರೆ ನಾಯಿನೂ ತಿರ್ಗಿ ನೋಡಲ್ಲ, ಅಲ್ಲೆಲ್ಲ ನಿಮಗೆ ಓದ್ಸೋಕಾಗಲ್ಲ ಬಿಟ್ಬಿಡಿ ಸುಮ್ನೆ!! ಇಲ್ಲೇ ಯಾವ್ದಾದ್ರು ಮಧುಗಿರಿ ಕಾಲೇಜಲ್ಲಿ ಡಿಗ್ರಿಗೆ ಹಾಕ್ಬಿಡಿ" ಎಂದು ಅಪ್ಪನ ಮುಖದ ಮೇಲೆ ಹೇಳಿದ್ದ ಆ ಮಹಾನುಭಾವ ಶ್ರೀಶೈಲ ಎಂಬ ವ್ಯಕ್ತಿ. ಬೆಂಗಳೂರಿನಲ್ಲೇ ಯಾವುದೊ ಪ್ರತಿಷ್ಟಿತ ಕಾಲೇಜಿನಲ್ಲಿ ಪ್ರಾಂಶುಪಾಲಕರಾಗಿ ಹಲವಾರು ವರ್ಷಗಳಿಂದ ಕೆಲಸ
ಮಾಡಿಕೊಂಡು ಬದುಕಿದ್ದ ಆ ಮನುಷ್ಯನಿಗೆ ಹೇಳುವಾಗ ಮಾತಿನ ಮೇಲೆ ನಿಗವೇ ಇಲ್ಲವೆಂದು ನನಗನ್ನಿಸಿತ್ತು. ಮನ್ನಸ್ಸಿನಲ್ಲೇ ಅಂದುಕೊಂಡಿದ್ದೆ "ಲೋ ಶೈಲಾ ನೀನ್ಯಾವಾಗ ಹೆಣ ಮಾತಾಡ್ಸೋಕೊಗಿದ್ದೆ, ನಾವೇನ್ ನಿಮ್ಮನೆಲಿರ್ತಿವಿ ಅಂತ ಕೇಳಿದ್ವ! ಬಡ್ಡಿಮಗನೆ, ನಮ್ಮಪ್ಪಂಗೆ ಸುಮ್ನೆ ಹೆದ್ರುಸ್ತಿಯಲ್ಲ" ಆದರೆ ನಮ್ಮಪ್ಪ ತಿರುಗಿಸಿ ಹೇಳಿದ್ದು ನನಗೆ ಬೆಟ್ಟದಷ್ಟು ಸಮಾಧಾನ ತಂದಿತ್ತು "ಹೇ ಬನ್ನಿ ಸಾರ್ , ಕಾಲೇಜ್ ಫೀಸ್ ಕಟ್ಟಿದ್ದಾಯ್ತು. ಸಮುದ್ರಕ್ಕೆ ಬಿದ್ಮೇಲೆ ಮಳೆಯಾದ್ರೆ ಏನು , ಚಳಿ ಆದ್ರೆ ಏನು ? ". ಪ್ರಪಂಚ ಇಂತಹ ಕಾಲೆಳೆಯುವರ ಮಧ್ಯೆ ಅಲ್ಲಲ್ಲಿ ಒಳ್ಳೆಯವರಿಂದಲೂ ತುಂಬಿದೆ ಎಂದನಿಸಿದ್ದು ಮರುದಿನ ಮನೆಗೆ ಬಂದ ನಾಗಪ್ಪನವರು ಈ ಮಾತುಗಳನ್ನು ಹೇಳಿದಾಗಲೇ "ಸಿದ್ದ್ರಾಜಣ್ಣ, ಧ್ಯೆರ್ಯ್ವಾಗಿ ಓದ್ಸಿ! ಅಲ್ಲೇ ಬೆಂಗ್ಳೂರ್ನಲ್ಲಿ ತೋಟದಪ್ಪ ಛತ್ರ ಅಪ್ಲಿಕೇಶನ್ ಕೊಡ್ತವ್ರೆ, ಹೋಗಿ ಅಪ್ಲೈ ಮಾಡ್ಬಿಡಿ". ಬೆಳ್ಳಂಬೆಳಗ್ಗೇ ಅಂದರೆ ಸುಮಾರು ನಾಲ್ಕಕ್ಕೆ ಅಮ್ಮ ಕೂಗಿದ್ದಳು. "ಆರಾಧ್ಯ, ಬಸ್ ಬರೋ ಹೊತ್ತಾಗಿದೆ, ಎದ್ದು ರೆಡಿಯಾಗು ಮಗನೇ". ಆತಂಕ ಮತ್ತು ಉತ್ಸಾಹ ಇವೆರಡರ ತೊಳಲಾಟದ ಮಧ್ಯೆ ಎದ್ದು ಹೊರಟ ನಾನು ನಂತರ ಕುಳಿತಿದ್ದು ದಿನಕ್ಕೊಂದೇ ಸಲ ಬರುವ ಕೆಂಪು ಬಸ್ಸಿನಲ್ಲಿ. ನೆನಪೇ ಇಲ್ಲದ ವಯಸ್ಸಿನಲ್ಲಿ ಬೆಂಗಳೂರಿನಿಂದ ಹೊಸಕೋಟೆಗೆ ಹೋಗಿದ್ದ ನೆನಪು ಬಿಟ್ಟರೆ ಬೆಂಗಳೂರಿಗೂ ನನಗೂ ಯಾವುದೇ ಸಂಬಂಧ ಉಳಿದಿರಲಿಲ್ಲ. ಹಾದಿಯಲ್ಲಿ ಬರುವ ಪ್ರತಿಯೊಂದು ಊರಿನ ಹೆಸರು ನೆನಪಿಟ್ಟು ಕೊಳ್ಳುವ ಪ್ರಯತ್ನ ಮಾಡುತ್ತಲೇ ಕುಳಿತಿದ್ದ ನನಗೆ ಕಂಡಿದ್ದು 8ನೇ ಮೈಲಿ ಬಸ್ ನಿಲ್ದಾಣ.
ನಮ್ಮೊರಿನ ಜನಕ್ಕೆ ಅದು ಬೆಂಗಳೂರಿನ ಮೊದಲ ಮೈಲಿಗಲ್ಲು. ಕೆಲಸಕ್ಕೆಂದು ಬಂದ ಮಕ್ಕಳೆಲ್ಲಾ ಅದೇ ಸುತ್ತಮುತ್ತಲ ಏರಿಯಾಗಳಲ್ಲೇ ವಾಸಿಸುವುದು ರೂಢಿಯಾಗಿತ್ತು ಅದಕ್ಕೆ ನನ್ನ ಪಕ್ಕದಲ್ಲೇ ಕುಳಿತಿದ್ದ ನನ್ನ ತಂದೆ ಹೇಳಿದ ಮಾತು ಇಂದಿಗೂ ನೆನಪಿದೆ. "ನೋಡಪ್ಪ, ರಾಜಕುಮಾರ ಇದೇ 8ನೇ ಮೈಲಿ!! ನಿಂಗೆ ಯಾವಾಗಾದ್ರೂ ಏನಾದ್ರೂ ತೊಂದ್ರೆ ಆದ್ರೆ, ಈ ಬಸ್ ಸ್ಟಾಪ್ ಗೆ ಬಂದು ನಿಂತ್ಕೋಬಿಡು. ನಮ್ಮೊರ್ನವ್ರು ಯಾರಾದ್ರೂ ಸಿಕ್ಕೇ ಸಿಗ್ತಾರೆ ಆಯ್ತಾ!". ನವೋದಯ ಶಾಲೆಯಲ್ಲಿ ಕಲಿತಿದ್ದ ನನಗೆ ಸ್ವತಂತ್ರ ಜೀವನ ಮಾಡುವ ಭಯ ಎಂದಿಗೊ ಹಾರಿಹೋಗಿತ್ತು. ಏಳು ವರ್ಷ ಮನೆಯಿಂದ ದೂರವೇ ಉಳಿದು ಬದುಕ್ಕಿದ್ದ ನನಗೆ ನವೋದಯ ಶಾಲೆ ಕಲಿಸಿದ್ದು ಅದನ್ನೇ: ಸ್ವತಂತ್ರ ಜೀವನ ಮತ್ತು ನಮ್ಯತೆ. ಆದ್ದರಿಂದ ಅಪ್ಪನ ಮಾತು ಅಷ್ಟಾಗಿ ಕಿವಿಗೆ ಹೋಗಿರಲಿಲ್ಲ. ಮೆಜೆಸ್ಟಿಕ್ಗೆಗೆ ಬಸ್ ಬಂದ ತಕ್ಷಣ ಇಳಿದು ನಾನು ಮೊದಲು ಗಮನಿಸಿದ್ದು ಬೆಂಗಳೂರಿನ ಜನರ ತರಾತುರಿಯನ್ನು. ಯಾರಿಗೂ ಸಮಯವಿಲ್ಲ , ಎಲ್ಲರೂ ಓಡುತ್ತಿರುವರೆ ಕಂಡದ್ದು. ಮೆಜೆಸ್ಟಿಕ್ ನಿಂದ ತೋಟದಪ್ಪ ಛತ್ರದ ಕಡೆ ಹೋಗುವ ದಾರಿಯಲ್ಲಿ ಕಂಡ ಅಸಾಮಾನ್ಯ ಗಲೀಜು ಮತ್ತು ವಿಚಿತ್ರ ಜನಜಂಗುಳಿ ನನಗೆ ಮತ್ತಷ್ಟು ಗಾಬರಿಗೊಳಿಸಿತ್ತು. .jpg)
ಗಾಬರಿಯಾದರೂ ಬಹಳ ಯೋಚಿಸದೆ ಮುಂದೆ ನಡೆದ ನನಗೆ ಕಂಡದ್ದು ವಿಶಾಲ ದ್ವಾರ ಬಾಗಿಲು. ಒಳಗೆ ಹೋದ ನಂತರ ಮತ್ತೆ ನನ್ನ ಮನೆಯೊಳಗೆ ಬಂದಂತಾದ ಅನುಭವ ಕಾರಣ ಸ್ವಚ್ಛತೆ ಮತ್ತು ಪ್ರಶಾಂತತೆ ಎದ್ದು ಕಾಣುತ್ತಿತ್ತು. ಆಗ ಶುರುವಾಗಿದ್ದು ಪೀಕಲಾಟ "ಮತ್ತೆ ಫೀಸ್ ಎಷ್ಟು ಕೇಳ್ತಾರೋ, ಅದು ಬೇರೆ ಸಿಟಿ ಸೆಂಟರ್ನಲ್ಲೆ ಮಾಡಿದಾರೆ! ಎಲ್ಲ ಕ್ಲೀನ್ ಆಗೇ ಕಾಣ್ತಾ ಇದೆ" ಮನಸ್ಸಿನಲ್ಲೇ ಯೋಚಿಸಿದ ನನಗೆ ಬಲು ದೊಡ್ದ ಅಶ್ಚರ್ಯವೋದು ಕಾದಿತ್ತು. ಅಲ್ಲೇ ಪರಿಚಯದವರೊಬ್ಬರನ್ನು ಅಪ್ಪ ಮಾತಡಿಸುತ್ತಿರುವಾಗ ನನಗೆ ತಿಳಿದಿದ್ದು ನಾಲ್ಕು ವರ್ಷಕ್ಕೆ ಬರಿ ೧೦೦ ರೂಪಾಯಿಗಳೆಂದು ಅದನ್ನು ಕೇಳಿದರೆ ವಾಪಸ್ ಕೊಡುವರೆಂದು ಕೇಳಿ ನನಗೆ ಒಂದು ಕ್ಷಣ ಭಾವುಕನಾಗಿದ್ದೆ. ಇಂತಹ ಬಹು ದೊಡ್ದ ಮಾದರಿಯ ಸೌಲಭ್ಯವು ಒಬ್ಬ ಮಹಾನ್ ದಾರ್ಶನಿಕರ ಕನಸೆಂದು ತಿಳಿದು ನಾ ಮತ್ತಷ್ಟು ಪುಳಕಿತಗೊಂದಿದ್ದೆ. ಸಾವಿರ ಜನರಲ್ಲಿ ಸಾವಿರ ಕೋಟಿಯಿರಬಹುದು ಆದರೆ ಅದನ್ನು ದಾನ ಮಾಡುವಷ್ಟು ಮನಸ್ಸುಳ್ಳ ಜನರು ಸಾವಿರಕ್ಕೆಷ್ಟು ? ಮನುಷ್ಯ ಮನುಷ್ಯನ್ನನ್ನೇ ತಿಂದು ಬದುಕುವ ಸಮಯದಲ್ಲಿ ದಾನ ಧರ್ಮದ ಮಾತುಗಳು ಅಷ್ಟಕ್ಕಷ್ಟೇ !. ನೀವು ದೂರದೂರಿನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿಳಿದರೆ ನಿಮಗೆ ಕಾಣುವುದು ಬಹುದೆತ್ತರ ಸಂಸ್ಥೆ ರಾವ್ ಬಹಾದ್ದೂರ್ ಧರ್ಮ ಪ್ರವತ್ತ ಗುಬ್ಬಿ ತೋಟದಪ್ಪನವರ ಸಂಸ್ಥೆಗಳು. ಆಕಾರದಲ್ಲಿ ಎತ್ತರವಿಲ್ಲದಿದ್ದರೂ ಆ ಸಂಸ್ಥೆಯ ಆದರ್ಶ ಮತ್ತು ಧ್ಯೇಯಗಳು ಬೆಟ್ಟದಷ್ಟೆತ್ತರ !! ಅಂದಿಗೆ ಶ್ರೀ ತೋಟದಪ್ಪನವರದ್ದು ಎರಡು ಉದ್ದೇಶಗಳು. ಒಂದು ದೇಶದ ಯಾವುದೇ ಮೂಲೆಯಿಂದ ಬಂದ ಬಡವರಿಗೆ ಅತೀ ಕಡಿಮೆ ದುಡ್ಡಿನಲ್ಲಿ ವಸತಿ ಕಲ್ಪಿಸಿಕೊಡುವುದು, ಮತ್ತೊಂದು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದಿಂದ ಬಂದ ಹಣದಿಂದ ಉಚಿತ ಊಟ ಮತ್ತು ವಸತಿ ನೀಡುವುದು. 
೧೯೦೩, ಫೆಬ್ರವರಿ ೧೧ ರಂದು ಶ್ರೀ ಕೃಷ್ಣ ರಾಜ ಒಡೆಯರ್ ರವರು ಈ ಸೌಲಭ್ಯವನ್ನು ಉದ್ಗಾಟಿಸಿದ್ದರು. ಮೊದಲು ೨೫ ಪೈಸೆಗೆ ಒಂದು ಕೊಠಡಿಯಂತೆ ಶುರು ಮಾಡಿದ್ದು ನಂತರ ೧೦ ರೂಪಾಯಿ ಕ್ರಮೇಣ ೨೦ ರೂಪಾಯಿ ತೆಗೆದುಕೊಳ್ಳುತ್ತಿದ್ದರು. ೩೦ ರೂಪಾಯಿಗೆ ಒಂದು ಚಡ್ಡಿಯೂ ಸಿಗದಿರೋ ಕಾಲದಲ್ಲಿ ಆ ಸಂಸ್ಥೆಯು ದೂರದೂರಿನಿಂದ ಬಂದ ಜನರಿಗೆ ೩೦ ರೂಪಾಯಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ನೀಡಿ ನಂಬಲಾಗದ ಸಹಾಯ ಮಾಡುತ್ತಿರುವುದು ಪ್ರಶಂಸನೀಯ. ಬಂದ ಹಣದಿಂದ ಉಚಿತ ವಿಧ್ಯಾರ್ಥಿ ನಿಲಯ ಸ್ಥಾಪಿಸಿ ನಿರಂತರ ಸಂರಕ್ಷಣೆಯ ಮಾದರಿಯನ್ನು ತೋಟದಪ್ಪನವರು ನಿರೂಪಿಸಿದ್ದರು. ಮುಂದಿನ ದಿನಗಳಲ್ಲಿ ಇಂಟರ್ವೂ ಮುಗಿಸಿ ಹಾಸ್ಟೆಲ್ಗೆ ದಾಖಾಲಾದೆ. ಅಲ್ಲಿಂದ ಶುರು ನನ್ನ ಬೆಂಗಳೂರಿನ ಜೀವನ. ಈ ಹಾಸ್ಟೆಲ್ನಲ್ಲಿ ಕಳೆದ ಪ್ರತಿಯೊಂದು ನಿಮಿಷವೂ ಮರೆಯಲಾಗದಂತಹ ಅನುಭವ. ಅಲ್ಲಿ ನನ್ನಂತೆಯೇ ಬೆಂಗಳೂರು ಅರಿಯದ ನೂರಾರು ಜನ, ಪ್ರತಿದಿನವೂ ಒಬ್ಬಬ್ಬರಿಂದ ಒಂದೊಂದರ ಮೇಲೆ ತಿಳುವಳಿಕೆ. ನವೋದಯ ಶಾಲೆಯಲ್ಲಿ ಒಂದು ಜಿಲ್ಲೆಯ ಅನುಭವವಾದರೆ ಇಲ್ಲಿ ಪೂರಾ ಕರ್ನಾಟಕ ದರ್ಶನವಾದಂತಾಯ್ತು. ಅಲ್ಲಿಂದ ನನಗೆ ಉತ್ತರ ಕರ್ನಾಟಕದ ಸ್ನೇಹಿತರ ಪರಿಚಯ ಮೊದಲಾಗಿ ಅವರ ಭಾಷೆ ಮತ್ತು ಸ್ವಾರಸ್ಯ ಬಹಳ ಹಿಡಿಸಿತ್ತು. ಮತ್ತೊಂದೆಡೆ ನನ್ನ ಸ್ನೇಹಿತರ ಗುಂಪು ದೊಡ್ಡದಾಗಿ ಬೆಳೆಯತೊಡಗಿತು. ಬೆಳಿಗ್ಗೆ ಎದ್ದರೆ ಉಚಿತ ಊಟ , ಕಡಿಮೆ ದುಡ್ಡಿನ ಬಿ ಎಂ ಟಿ ಸಿ ಪಾಸ್ ಒಂದಿದ್ದರೆ ಸಾಕು ಇಡೀ ಬೆಂಗಳೂರೆ ನಮ್ಮ ಕೈಲಿದ್ದಂತೆ ಭಾಸವಾಯ್ತು. ಅಲ್ಲಿ ಎಲ್ಲರೂ ಒಂದೇ!! ಒಬ್ಬನಿಗೆ ಒಂದು ತಿಳಿಯದಿದ್ದರೆ ಎಲ್ಲರೂ ಸೇರಿ ಒಂದು ಸಲ ನಕ್ಕು ಅವನಿಗೆ ತಿಳಿ ಹೇಳುವುದು ಸಾಮಾನ್ಯವಾಗಿಬಿಟ್ತಿತು. ಮನೆಯಲ್ಲಿ ಉಳಿದವರಿಗೆ ಬೆಂಗಳೂರಿನ ಒಂದು ಪ್ರದೇಶ ಪರಿಚಯವಾದರೆ ಹಾಸ್ಟೆಲ್ನಲ್ಲಿದ್ದ ನಮಗೆ ಇಡೀ ಬೆಂಗಳೂರೆ ಪರಿಚಯ. ಪ್ರತಿದಿನ ಒಂದೊಂದು ಕಡೆ ನನ್ನ ಸ್ನೇಹಿತರೂ ಕಾಲೇಜುಗಳ ಕಡೆ ಹೋಗುತ್ತಿದ್ದ ಕಾರಣ ಎಲ್ಲರೆಡೆ ಪಾಸ್ ಕಡ್ದಾಯವಾಗಿರುತ್ತಿತ್ತು. ಎಲ್ಲಿಂದ ಎಲ್ಲಿಗೆ ಹೋದರು ಯಾವುದಾದರೊಂದು ಪಾಸ್ ಸಿಕ್ಕೇ ಸಿಗುತ್ತಿತ್ತು. ಪ್ರತಿದಿನ ಆಟ, ಬಸಪ್ಪನವರ (ವಾರ್ಡನ್) ಕೈಲೊಂದು ಸಲ ಬೈಗುಳ ಮತ್ತ್ಯಾರಿಗಾದರೂ
ಕಾಟ ಕೊಡದೆ ದಿನವೇ ಮುಗಿಯುತ್ತಿರಲಿಲ್ಲ. ಅಲ್ಲೇ ಎಷ್ಟೋ ಜನರ ಪ್ರೇಮಕಥೆಗಳ ಪುರಾಣಗಳು ಶುರುವಾಗಿದ್ದು. ಎಲ್ಲೋ ನೋಡಿದ ಹುಡುಗಿಯ ಮೇಲೆ ಆಕರ್ಷಕರಾಗಿ ಹಾಸ್ಟೆಲ್ಗೆ ವಾಪಸ್ ಬಂದು ಎಲ್ಲರೂ ಕೂಡಿ ಮಾತನಾಡಿರುವುದು ಅದೆಷ್ಟೋ
ಸಲ !! ಒಬ್ಬ ಯಾರಾದರೂ ಒಂದು ದಿನ ಬಟ್ಟೆ ಒಗೆದರೆ ಮರುದಿನ ಅದು ಯಾರು ಹಾಕಿಕೊಳ್ಳುತ್ತಾರೆ ಎಂಬುದೇ ಕುತೂಹಲ. ಒಗೆದವನಿಗೆ ಗೊತ್ತಾಗದೆ ಏರಿಸಿಕೊಂಡು ಬಿ ಎಂ ಟಿ ಸಿ ಬಸ್ ಏರಿ ಕಾಲೇಜು ಮುಗಿಸಿ ಬಂದಾದ ಮೇಲೆಯೇ ಗೊತ್ತಾಗುತ್ತಿದ್ದಿದ್ದು ಕದ್ದದ್ದು ಯಾರು ಎಂದು!! 
ಅದು ಬಡ ಮಕ್ಕಳ ಹಾಸ್ಟೆಲ್ ಆಗಿದ್ದರಿಂದ ಟಿ.ವಿ, ಇಂಟರ್ನೆಟ್ ಸೌಲಭ್ಯಗಳನ್ನು ಕೇಳಲು ಸಾಧ್ಯವಿರಲಿಲ್ಲ. ಮೂರು ಹೊತ್ತು ಊಟ, ಮಲಗಲು ಜಾಗ ಸಿಕ್ಕಿದ್ದೇ ಒಂದು ದೊಡ್ದ ಸೌಭಾಗ್ಯ ಇದರಲ್ಲಿ ಅದೆಲ್ಲ ಕೇಳುವ ಕಥೆ ಬಿಡಿ. ಆದರೇನಂತೆ ಈ ಕ್ರಿಕೆಟ್ ಹುಚ್ಚು ಆಗ ಬಹಳ ಹೆಚ್ಚಿತ್ತು. ಆಗ ಬೇರೆ ಟಿ೨೦ ವಿಶ್ವ ಕಪ್ ಬೇರೆ ಶುರುವಾಗಿತ್ತು. ಮ್ಯಾಚ್ ನೋಡಲೇಬೇಕಲ್ಲ. ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ಅಷ್ಟು ಬೇಗ ತಿಳಿಯದ ವಯಸ್ಸು ಬೇರೆ. ಅದಕ್ಕೊಂದು ಯೋಜನೆ ರೂಪಿಸಿ, ಟಿ.ವಿ ಟ್ಯೂನರ್ ಖರೀದಿಸಿ ಪಕ್ಕದ ರೈಲ್ವೆ ನಿಲ್ದಾಣದ ಕ಼್ವಾರ್ಟರ್ಸ್ಗಳಿಂದ ಉಪಯೋಗಿಸದೆ ಬಿದ್ದಿದ್ದ ಕೇಬಲ್ ಕನೆಕ್ಕ್ಶನ್ ಕದ್ದು ನಮ್ಮ ಟ್ಯುನರ್ಗೆ ಜೋಡಿಸಿ ಟಿ೨೦ ಮ್ಯಾಚ್ಗಳನ್ನು ಹಾಸ್ಟೆಲ್ ಹುಡುಗರನ್ನೆಲ್ಲಾ ಸೇರಿಸಿ ನೋಡಿ ಮಜಾ ಮಾಡಿದ್ದು ನೆನೆದರೆ ಮುಖದ ಮೇಲೆ ಒಂದು ಕಿರುನಗೆ ಮೂಡುತ್ತದೆ. ಆದರೆ ನಾವು ಮಾಡಿದ್ದು ತಪ್ಪು ಎಂದು ತಿಳಿಯುವ ಹೊತ್ತಿಗೆ ಅದು ಬಹಳ ತಡವಾಗಿತ್ತು. ಆ ವಿಷಯ ತಿಳಿದವರಿಗೆ ತಿಳಿದರೆ ಸಾಕು ಬಿಡಿ. ಎಲ್ಲರಿಗೂ ತಿಳಿಯಲೇಬೇಕೆಂಬ ಮುಖ್ಯ ವಿಷಯವೇನಲ್ಲ. ಹೀಗೆ ಪ್ರತಿಯೊಂದು ವಿಷಯದಲ್ಲೂ ಅಲ್ಲಿದ್ದ ಹುಡುಗರಿಗೆ ಬಹು ಸ್ವಾತಂತ್ರ್ಯ ನೀಡಿಯೂ ಹುಡುಗರನ್ನು ಅದ್ದುಬಸ್ತಿನಲ್ಲಿ ಇಟ್ಟಿದ್ದ ಬಸಪ್ಪನವರಿಗೆ ನನ್ನದೊಂದು ದೊಡ್ಡ ಸಲಾಂ ! ಅಲ್ಲಿರುವಾಗ ನಾನು ಕೆಲವು ತಪ್ಪುಗಳನ್ನು ಮಾಡಿರುವುದರ ಬಗ್ಗೆ ನನಗೆ ಪಶ್ಚತಾಪಗಳಿದೆ. ಈ ಹಾಸ್ಟೆಲ್ ಜೀವನವೆಂದರೆ ಹಾಗೆ , ತಪ್ಪುಗಳು ಸಹಜ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವುದೇ ಜೀವನ. ಇಲ್ಲಿ ಯಾರಾದರೋ ನನ್ನ ಹಾಸ್ಟೆಲ್ ಸ್ನೇಹಿತರೂ ಇದನ್ನು ಓದುತ್ತಿದ್ದಲ್ಲಿ ನಿಮಗೇನಾದರೂ ನನ್ನಿಂದ ತೊಂದರೆಯಾಗಿದ್ದಲ್ಲಿ
ನನ್ನ ಕ್ಷಮೆಯಿರಲಿ. ಆದರೆ ಅವುಗಳನ್ನೆಲ್ಲ ಮರೆತು ಇಂದಿಗೂ ನನ್ನ ಹಾಸ್ಟೆಲ್ ಸ್ನೇಹಿತರನ್ನು ನೋಡಿದಾಗ ಅದೇ ಸಂತೋಷ ಮತ್ತು ಅದೇ ಪ್ರೀತಿ ಉಕ್ಕಿ ಹರಿಯುವುದನ್ನು ಯಾರೂ ತಡೆಯಲಾರರು. ಈಗಲೂ ನಾ ಬೆಂಗಳೂರಿನಲ್ಲಿ ಓಡಾಡುತ್ತಿರುವಾಗ ನನ್ನ ಹಿರಿಯರಾಗಲಿ ಕಿರಿಯಾಗಲಿ ಸಿಗುವುದುಂಟು , ನಾ ಎಷ್ಟೇ ಆತುರದಲ್ಲಿದ್ದರೂ ಬೈಕ್ ನಿಲ್ಲಿಸಿ ಅವರನ್ನು ಮಾತನಾಡಿಸಿಯೇ ಹೋಗುವುದು. ನನ್ನದು ತುಮುಕೂರು ಜಿಲ್ಲೆಯ ಮಧುಗಿರಿ ತಾಲೂಕು. ಅಲ್ಲಿನ ಪ್ರತಿಯೊಂದು ಬಸ್
ಗಳ ಹಿಂದೆ ಹೀಗಿರುವುದನ್ನು ನೋಡಿದ್ದೆ "ಧರೆಯೊಳಲ್ಲೇ ಇರಲಿ ನಾ ಮರೆಯಲಾರೆ ಈ ಮಧುಗಿರಿ" ಎಂದು. ಈಗ ಅದನ್ನೇ ಪುನರುಚ್ಚರಿಸುತ್ತಿರುವೆ "ಧರೆಯೊಳಲ್ಲೇ ಇರಲಿ ನಾ ಮರೆಯಲಾರೆ ಈ ತೋಟದಪ್ಪನವರ ಸಹಾಯವನ್ನು". ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಬಹುದೊಡ್ಡ ಸಹಾಯ ಮಾಡಿದ ಆ ಮಹಾನ್ ಶ್ರೀ ರಾವ್ ಬಹಾದ್ದೂರ್ ಧರ್ಮ ಪ್ರವರ್ತ ಗುಬ್ಬಿ ತೋಟದಪ್ಪನವರಿಗೆ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಂದ ಸಾವಿರ ಸಾವಿರ ಸಾಷ್ಟಾಂಗ ನಮಸ್ಕಾರಗಳು.
ನಮ್ಮೊರಿನ ಜನಕ್ಕೆ ಅದು ಬೆಂಗಳೂರಿನ ಮೊದಲ ಮೈಲಿಗಲ್ಲು. ಕೆಲಸಕ್ಕೆಂದು ಬಂದ ಮಕ್ಕಳೆಲ್ಲಾ ಅದೇ ಸುತ್ತಮುತ್ತಲ ಏರಿಯಾಗಳಲ್ಲೇ ವಾಸಿಸುವುದು ರೂಢಿಯಾಗಿತ್ತು ಅದಕ್ಕೆ ನನ್ನ ಪಕ್ಕದಲ್ಲೇ ಕುಳಿತಿದ್ದ ನನ್ನ ತಂದೆ ಹೇಳಿದ ಮಾತು ಇಂದಿಗೂ ನೆನಪಿದೆ. "ನೋಡಪ್ಪ, ರಾಜಕುಮಾರ ಇದೇ 8ನೇ ಮೈಲಿ!! ನಿಂಗೆ ಯಾವಾಗಾದ್ರೂ ಏನಾದ್ರೂ ತೊಂದ್ರೆ ಆದ್ರೆ, ಈ ಬಸ್ ಸ್ಟಾಪ್ ಗೆ ಬಂದು ನಿಂತ್ಕೋಬಿಡು. ನಮ್ಮೊರ್ನವ್ರು ಯಾರಾದ್ರೂ ಸಿಕ್ಕೇ ಸಿಗ್ತಾರೆ ಆಯ್ತಾ!". ನವೋದಯ ಶಾಲೆಯಲ್ಲಿ ಕಲಿತಿದ್ದ ನನಗೆ ಸ್ವತಂತ್ರ ಜೀವನ ಮಾಡುವ ಭಯ ಎಂದಿಗೊ ಹಾರಿಹೋಗಿತ್ತು. ಏಳು ವರ್ಷ ಮನೆಯಿಂದ ದೂರವೇ ಉಳಿದು ಬದುಕ್ಕಿದ್ದ ನನಗೆ ನವೋದಯ ಶಾಲೆ ಕಲಿಸಿದ್ದು ಅದನ್ನೇ: ಸ್ವತಂತ್ರ ಜೀವನ ಮತ್ತು ನಮ್ಯತೆ. ಆದ್ದರಿಂದ ಅಪ್ಪನ ಮಾತು ಅಷ್ಟಾಗಿ ಕಿವಿಗೆ ಹೋಗಿರಲಿಲ್ಲ. ಮೆಜೆಸ್ಟಿಕ್ಗೆಗೆ ಬಸ್ ಬಂದ ತಕ್ಷಣ ಇಳಿದು ನಾನು ಮೊದಲು ಗಮನಿಸಿದ್ದು ಬೆಂಗಳೂರಿನ ಜನರ ತರಾತುರಿಯನ್ನು. ಯಾರಿಗೂ ಸಮಯವಿಲ್ಲ , ಎಲ್ಲರೂ ಓಡುತ್ತಿರುವರೆ ಕಂಡದ್ದು. ಮೆಜೆಸ್ಟಿಕ್ ನಿಂದ ತೋಟದಪ್ಪ ಛತ್ರದ ಕಡೆ ಹೋಗುವ ದಾರಿಯಲ್ಲಿ ಕಂಡ ಅಸಾಮಾನ್ಯ ಗಲೀಜು ಮತ್ತು ವಿಚಿತ್ರ ಜನಜಂಗುಳಿ ನನಗೆ ಮತ್ತಷ್ಟು ಗಾಬರಿಗೊಳಿಸಿತ್ತು. .jpg)
ಗಾಬರಿಯಾದರೂ ಬಹಳ ಯೋಚಿಸದೆ ಮುಂದೆ ನಡೆದ ನನಗೆ ಕಂಡದ್ದು ವಿಶಾಲ ದ್ವಾರ ಬಾಗಿಲು. ಒಳಗೆ ಹೋದ ನಂತರ ಮತ್ತೆ ನನ್ನ ಮನೆಯೊಳಗೆ ಬಂದಂತಾದ ಅನುಭವ ಕಾರಣ ಸ್ವಚ್ಛತೆ ಮತ್ತು ಪ್ರಶಾಂತತೆ ಎದ್ದು ಕಾಣುತ್ತಿತ್ತು. ಆಗ ಶುರುವಾಗಿದ್ದು ಪೀಕಲಾಟ "ಮತ್ತೆ ಫೀಸ್ ಎಷ್ಟು ಕೇಳ್ತಾರೋ, ಅದು ಬೇರೆ ಸಿಟಿ ಸೆಂಟರ್ನಲ್ಲೆ ಮಾಡಿದಾರೆ! ಎಲ್ಲ ಕ್ಲೀನ್ ಆಗೇ ಕಾಣ್ತಾ ಇದೆ" ಮನಸ್ಸಿನಲ್ಲೇ ಯೋಚಿಸಿದ ನನಗೆ ಬಲು ದೊಡ್ದ ಅಶ್ಚರ್ಯವೋದು ಕಾದಿತ್ತು. ಅಲ್ಲೇ ಪರಿಚಯದವರೊಬ್ಬರನ್ನು ಅಪ್ಪ ಮಾತಡಿಸುತ್ತಿರುವಾಗ ನನಗೆ ತಿಳಿದಿದ್ದು ನಾಲ್ಕು ವರ್ಷಕ್ಕೆ ಬರಿ ೧೦೦ ರೂಪಾಯಿಗಳೆಂದು ಅದನ್ನು ಕೇಳಿದರೆ ವಾಪಸ್ ಕೊಡುವರೆಂದು ಕೇಳಿ ನನಗೆ ಒಂದು ಕ್ಷಣ ಭಾವುಕನಾಗಿದ್ದೆ. ಇಂತಹ ಬಹು ದೊಡ್ದ ಮಾದರಿಯ ಸೌಲಭ್ಯವು ಒಬ್ಬ ಮಹಾನ್ ದಾರ್ಶನಿಕರ ಕನಸೆಂದು ತಿಳಿದು ನಾ ಮತ್ತಷ್ಟು ಪುಳಕಿತಗೊಂದಿದ್ದೆ. ಸಾವಿರ ಜನರಲ್ಲಿ ಸಾವಿರ ಕೋಟಿಯಿರಬಹುದು ಆದರೆ ಅದನ್ನು ದಾನ ಮಾಡುವಷ್ಟು ಮನಸ್ಸುಳ್ಳ ಜನರು ಸಾವಿರಕ್ಕೆಷ್ಟು ? ಮನುಷ್ಯ ಮನುಷ್ಯನ್ನನ್ನೇ ತಿಂದು ಬದುಕುವ ಸಮಯದಲ್ಲಿ ದಾನ ಧರ್ಮದ ಮಾತುಗಳು ಅಷ್ಟಕ್ಕಷ್ಟೇ !. ನೀವು ದೂರದೂರಿನಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿಳಿದರೆ ನಿಮಗೆ ಕಾಣುವುದು ಬಹುದೆತ್ತರ ಸಂಸ್ಥೆ ರಾವ್ ಬಹಾದ್ದೂರ್ ಧರ್ಮ ಪ್ರವತ್ತ ಗುಬ್ಬಿ ತೋಟದಪ್ಪನವರ ಸಂಸ್ಥೆಗಳು. ಆಕಾರದಲ್ಲಿ ಎತ್ತರವಿಲ್ಲದಿದ್ದರೂ ಆ ಸಂಸ್ಥೆಯ ಆದರ್ಶ ಮತ್ತು ಧ್ಯೇಯಗಳು ಬೆಟ್ಟದಷ್ಟೆತ್ತರ !! ಅಂದಿಗೆ ಶ್ರೀ ತೋಟದಪ್ಪನವರದ್ದು ಎರಡು ಉದ್ದೇಶಗಳು. ಒಂದು ದೇಶದ ಯಾವುದೇ ಮೂಲೆಯಿಂದ ಬಂದ ಬಡವರಿಗೆ ಅತೀ ಕಡಿಮೆ ದುಡ್ಡಿನಲ್ಲಿ ವಸತಿ ಕಲ್ಪಿಸಿಕೊಡುವುದು, ಮತ್ತೊಂದು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯದಿಂದ ಬಂದ ಹಣದಿಂದ ಉಚಿತ ಊಟ ಮತ್ತು ವಸತಿ ನೀಡುವುದು.

೧೯೦೩, ಫೆಬ್ರವರಿ ೧೧ ರಂದು ಶ್ರೀ ಕೃಷ್ಣ ರಾಜ ಒಡೆಯರ್ ರವರು ಈ ಸೌಲಭ್ಯವನ್ನು ಉದ್ಗಾಟಿಸಿದ್ದರು. ಮೊದಲು ೨೫ ಪೈಸೆಗೆ ಒಂದು ಕೊಠಡಿಯಂತೆ ಶುರು ಮಾಡಿದ್ದು ನಂತರ ೧೦ ರೂಪಾಯಿ ಕ್ರಮೇಣ ೨೦ ರೂಪಾಯಿ ತೆಗೆದುಕೊಳ್ಳುತ್ತಿದ್ದರು. ೩೦ ರೂಪಾಯಿಗೆ ಒಂದು ಚಡ್ಡಿಯೂ ಸಿಗದಿರೋ ಕಾಲದಲ್ಲಿ ಆ ಸಂಸ್ಥೆಯು ದೂರದೂರಿನಿಂದ ಬಂದ ಜನರಿಗೆ ೩೦ ರೂಪಾಯಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ನೀಡಿ ನಂಬಲಾಗದ ಸಹಾಯ ಮಾಡುತ್ತಿರುವುದು ಪ್ರಶಂಸನೀಯ. ಬಂದ ಹಣದಿಂದ ಉಚಿತ ವಿಧ್ಯಾರ್ಥಿ ನಿಲಯ ಸ್ಥಾಪಿಸಿ ನಿರಂತರ ಸಂರಕ್ಷಣೆಯ ಮಾದರಿಯನ್ನು ತೋಟದಪ್ಪನವರು ನಿರೂಪಿಸಿದ್ದರು. ಮುಂದಿನ ದಿನಗಳಲ್ಲಿ ಇಂಟರ್ವೂ ಮುಗಿಸಿ ಹಾಸ್ಟೆಲ್ಗೆ ದಾಖಾಲಾದೆ. ಅಲ್ಲಿಂದ ಶುರು ನನ್ನ ಬೆಂಗಳೂರಿನ ಜೀವನ. ಈ ಹಾಸ್ಟೆಲ್ನಲ್ಲಿ ಕಳೆದ ಪ್ರತಿಯೊಂದು ನಿಮಿಷವೂ ಮರೆಯಲಾಗದಂತಹ ಅನುಭವ. ಅಲ್ಲಿ ನನ್ನಂತೆಯೇ ಬೆಂಗಳೂರು ಅರಿಯದ ನೂರಾರು ಜನ, ಪ್ರತಿದಿನವೂ ಒಬ್ಬಬ್ಬರಿಂದ ಒಂದೊಂದರ ಮೇಲೆ ತಿಳುವಳಿಕೆ. ನವೋದಯ ಶಾಲೆಯಲ್ಲಿ ಒಂದು ಜಿಲ್ಲೆಯ ಅನುಭವವಾದರೆ ಇಲ್ಲಿ ಪೂರಾ ಕರ್ನಾಟಕ ದರ್ಶನವಾದಂತಾಯ್ತು. ಅಲ್ಲಿಂದ ನನಗೆ ಉತ್ತರ ಕರ್ನಾಟಕದ ಸ್ನೇಹಿತರ ಪರಿಚಯ ಮೊದಲಾಗಿ ಅವರ ಭಾಷೆ ಮತ್ತು ಸ್ವಾರಸ್ಯ ಬಹಳ ಹಿಡಿಸಿತ್ತು. ಮತ್ತೊಂದೆಡೆ ನನ್ನ ಸ್ನೇಹಿತರ ಗುಂಪು ದೊಡ್ಡದಾಗಿ ಬೆಳೆಯತೊಡಗಿತು. ಬೆಳಿಗ್ಗೆ ಎದ್ದರೆ ಉಚಿತ ಊಟ , ಕಡಿಮೆ ದುಡ್ಡಿನ ಬಿ ಎಂ ಟಿ ಸಿ ಪಾಸ್ ಒಂದಿದ್ದರೆ ಸಾಕು ಇಡೀ ಬೆಂಗಳೂರೆ ನಮ್ಮ ಕೈಲಿದ್ದಂತೆ ಭಾಸವಾಯ್ತು. ಅಲ್ಲಿ ಎಲ್ಲರೂ ಒಂದೇ!! ಒಬ್ಬನಿಗೆ ಒಂದು ತಿಳಿಯದಿದ್ದರೆ ಎಲ್ಲರೂ ಸೇರಿ ಒಂದು ಸಲ ನಕ್ಕು ಅವನಿಗೆ ತಿಳಿ ಹೇಳುವುದು ಸಾಮಾನ್ಯವಾಗಿಬಿಟ್ತಿತು. ಮನೆಯಲ್ಲಿ ಉಳಿದವರಿಗೆ ಬೆಂಗಳೂರಿನ ಒಂದು ಪ್ರದೇಶ ಪರಿಚಯವಾದರೆ ಹಾಸ್ಟೆಲ್ನಲ್ಲಿದ್ದ ನಮಗೆ ಇಡೀ ಬೆಂಗಳೂರೆ ಪರಿಚಯ. ಪ್ರತಿದಿನ ಒಂದೊಂದು ಕಡೆ ನನ್ನ ಸ್ನೇಹಿತರೂ ಕಾಲೇಜುಗಳ ಕಡೆ ಹೋಗುತ್ತಿದ್ದ ಕಾರಣ ಎಲ್ಲರೆಡೆ ಪಾಸ್ ಕಡ್ದಾಯವಾಗಿರುತ್ತಿತ್ತು. ಎಲ್ಲಿಂದ ಎಲ್ಲಿಗೆ ಹೋದರು ಯಾವುದಾದರೊಂದು ಪಾಸ್ ಸಿಕ್ಕೇ ಸಿಗುತ್ತಿತ್ತು. ಪ್ರತಿದಿನ ಆಟ, ಬಸಪ್ಪನವರ (ವಾರ್ಡನ್) ಕೈಲೊಂದು ಸಲ ಬೈಗುಳ ಮತ್ತ್ಯಾರಿಗಾದರೂ ಕಾಟ ಕೊಡದೆ ದಿನವೇ ಮುಗಿಯುತ್ತಿರಲಿಲ್ಲ. ಅಲ್ಲೇ ಎಷ್ಟೋ ಜನರ ಪ್ರೇಮಕಥೆಗಳ ಪುರಾಣಗಳು ಶುರುವಾಗಿದ್ದು. ಎಲ್ಲೋ ನೋಡಿದ ಹುಡುಗಿಯ ಮೇಲೆ ಆಕರ್ಷಕರಾಗಿ ಹಾಸ್ಟೆಲ್ಗೆ ವಾಪಸ್ ಬಂದು ಎಲ್ಲರೂ ಕೂಡಿ ಮಾತನಾಡಿರುವುದು ಅದೆಷ್ಟೋ ಸಲ !! ಒಬ್ಬ ಯಾರಾದರೂ ಒಂದು ದಿನ ಬಟ್ಟೆ ಒಗೆದರೆ ಮರುದಿನ ಅದು ಯಾರು ಹಾಕಿಕೊಳ್ಳುತ್ತಾರೆ ಎಂಬುದೇ ಕುತೂಹಲ. ಒಗೆದವನಿಗೆ ಗೊತ್ತಾಗದೆ ಏರಿಸಿಕೊಂಡು ಬಿ ಎಂ ಟಿ ಸಿ ಬಸ್ ಏರಿ ಕಾಲೇಜು ಮುಗಿಸಿ ಬಂದಾದ ಮೇಲೆಯೇ ಗೊತ್ತಾಗುತ್ತಿದ್ದಿದ್ದು ಕದ್ದದ್ದು ಯಾರು ಎಂದು!!

ಅದು ಬಡ ಮಕ್ಕಳ ಹಾಸ್ಟೆಲ್ ಆಗಿದ್ದರಿಂದ ಟಿ.ವಿ, ಇಂಟರ್ನೆಟ್ ಸೌಲಭ್ಯಗಳನ್ನು ಕೇಳಲು ಸಾಧ್ಯವಿರಲಿಲ್ಲ. ಮೂರು ಹೊತ್ತು ಊಟ, ಮಲಗಲು ಜಾಗ ಸಿಕ್ಕಿದ್ದೇ ಒಂದು ದೊಡ್ದ ಸೌಭಾಗ್ಯ ಇದರಲ್ಲಿ ಅದೆಲ್ಲ ಕೇಳುವ ಕಥೆ ಬಿಡಿ. ಆದರೇನಂತೆ ಈ ಕ್ರಿಕೆಟ್ ಹುಚ್ಚು ಆಗ ಬಹಳ ಹೆಚ್ಚಿತ್ತು. ಆಗ ಬೇರೆ ಟಿ೨೦ ವಿಶ್ವ ಕಪ್ ಬೇರೆ ಶುರುವಾಗಿತ್ತು. ಮ್ಯಾಚ್ ನೋಡಲೇಬೇಕಲ್ಲ. ತಪ್ಪು ಯಾವುದು, ಸರಿ ಯಾವುದು ಎಂಬುದನ್ನು ಅಷ್ಟು ಬೇಗ ತಿಳಿಯದ ವಯಸ್ಸು ಬೇರೆ. ಅದಕ್ಕೊಂದು ಯೋಜನೆ ರೂಪಿಸಿ, ಟಿ.ವಿ ಟ್ಯೂನರ್ ಖರೀದಿಸಿ ಪಕ್ಕದ ರೈಲ್ವೆ ನಿಲ್ದಾಣದ ಕ಼್ವಾರ್ಟರ್ಸ್ಗಳಿಂದ ಉಪಯೋಗಿಸದೆ ಬಿದ್ದಿದ್ದ ಕೇಬಲ್ ಕನೆಕ್ಕ್ಶನ್ ಕದ್ದು ನಮ್ಮ ಟ್ಯುನರ್ಗೆ ಜೋಡಿಸಿ ಟಿ೨೦ ಮ್ಯಾಚ್ಗಳನ್ನು ಹಾಸ್ಟೆಲ್ ಹುಡುಗರನ್ನೆಲ್ಲಾ ಸೇರಿಸಿ ನೋಡಿ ಮಜಾ ಮಾಡಿದ್ದು ನೆನೆದರೆ ಮುಖದ ಮೇಲೆ ಒಂದು ಕಿರುನಗೆ ಮೂಡುತ್ತದೆ. ಆದರೆ ನಾವು ಮಾಡಿದ್ದು ತಪ್ಪು ಎಂದು ತಿಳಿಯುವ ಹೊತ್ತಿಗೆ ಅದು ಬಹಳ ತಡವಾಗಿತ್ತು. ಆ ವಿಷಯ ತಿಳಿದವರಿಗೆ ತಿಳಿದರೆ ಸಾಕು ಬಿಡಿ. ಎಲ್ಲರಿಗೂ ತಿಳಿಯಲೇಬೇಕೆಂಬ ಮುಖ್ಯ ವಿಷಯವೇನಲ್ಲ. ಹೀಗೆ ಪ್ರತಿಯೊಂದು ವಿಷಯದಲ್ಲೂ ಅಲ್ಲಿದ್ದ ಹುಡುಗರಿಗೆ ಬಹು ಸ್ವಾತಂತ್ರ್ಯ ನೀಡಿಯೂ ಹುಡುಗರನ್ನು ಅದ್ದುಬಸ್ತಿನಲ್ಲಿ ಇಟ್ಟಿದ್ದ ಬಸಪ್ಪನವರಿಗೆ ನನ್ನದೊಂದು ದೊಡ್ಡ ಸಲಾಂ ! ಅಲ್ಲಿರುವಾಗ ನಾನು ಕೆಲವು ತಪ್ಪುಗಳನ್ನು ಮಾಡಿರುವುದರ ಬಗ್ಗೆ ನನಗೆ ಪಶ್ಚತಾಪಗಳಿದೆ. ಈ ಹಾಸ್ಟೆಲ್ ಜೀವನವೆಂದರೆ ಹಾಗೆ , ತಪ್ಪುಗಳು ಸಹಜ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವುದೇ ಜೀವನ. ಇಲ್ಲಿ ಯಾರಾದರೋ ನನ್ನ ಹಾಸ್ಟೆಲ್ ಸ್ನೇಹಿತರೂ ಇದನ್ನು ಓದುತ್ತಿದ್ದಲ್ಲಿ ನಿಮಗೇನಾದರೂ ನನ್ನಿಂದ ತೊಂದರೆಯಾಗಿದ್ದಲ್ಲಿ ನನ್ನ ಕ್ಷಮೆಯಿರಲಿ. ಆದರೆ ಅವುಗಳನ್ನೆಲ್ಲ ಮರೆತು ಇಂದಿಗೂ ನನ್ನ ಹಾಸ್ಟೆಲ್ ಸ್ನೇಹಿತರನ್ನು ನೋಡಿದಾಗ ಅದೇ ಸಂತೋಷ ಮತ್ತು ಅದೇ ಪ್ರೀತಿ ಉಕ್ಕಿ ಹರಿಯುವುದನ್ನು ಯಾರೂ ತಡೆಯಲಾರರು. ಈಗಲೂ ನಾ ಬೆಂಗಳೂರಿನಲ್ಲಿ ಓಡಾಡುತ್ತಿರುವಾಗ ನನ್ನ ಹಿರಿಯರಾಗಲಿ ಕಿರಿಯಾಗಲಿ ಸಿಗುವುದುಂಟು , ನಾ ಎಷ್ಟೇ ಆತುರದಲ್ಲಿದ್ದರೂ ಬೈಕ್ ನಿಲ್ಲಿಸಿ ಅವರನ್ನು ಮಾತನಾಡಿಸಿಯೇ ಹೋಗುವುದು. ನನ್ನದು ತುಮುಕೂರು ಜಿಲ್ಲೆಯ ಮಧುಗಿರಿ ತಾಲೂಕು. ಅಲ್ಲಿನ ಪ್ರತಿಯೊಂದು ಬಸ್ ಗಳ ಹಿಂದೆ ಹೀಗಿರುವುದನ್ನು ನೋಡಿದ್ದೆ "ಧರೆಯೊಳಲ್ಲೇ ಇರಲಿ ನಾ ಮರೆಯಲಾರೆ ಈ ಮಧುಗಿರಿ" ಎಂದು. ಈಗ ಅದನ್ನೇ ಪುನರುಚ್ಚರಿಸುತ್ತಿರುವೆ "ಧರೆಯೊಳಲ್ಲೇ ಇರಲಿ ನಾ ಮರೆಯಲಾರೆ ಈ ತೋಟದಪ್ಪನವರ ಸಹಾಯವನ್ನು". ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಬಹುದೊಡ್ಡ ಸಹಾಯ ಮಾಡಿದ ಆ ಮಹಾನ್ ಶ್ರೀ ರಾವ್ ಬಹಾದ್ದೂರ್ ಧರ್ಮ ಪ್ರವರ್ತ ಗುಬ್ಬಿ ತೋಟದಪ್ಪನವರಿಗೆ ನನ್ನಂತಹ ಸಾವಿರಾರು ವಿದ್ಯಾರ್ಥಿಗಳಿಂದ ಸಾವಿರ ಸಾವಿರ ಸಾಷ್ಟಾಂಗ ನಮಸ್ಕಾರಗಳು.

Thumba Chennagide .. Hostel Life Mareyokagolla ... navodaya kooda...
ReplyDeleteDhnayavaadagalu :)
ReplyDeleteThank u
ReplyDeleteಮುಚ್ಚುಮರೆ ಇಲ್ಲದ,ಸರಳವಾದ ಕನ್ನಡದಲ್ಲಿ ಬರೆಯುತ್ತಿರುವ ಉದಯೊನ್ಮುಖ ಬರಹಗಾರನಿಗೆ ನಮಸ್ಕಾರ ....ತುಂಬ ಚೆನ್ನಾಗಿದೆ....
ReplyDeleteಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೇಗೆ ಇರಲಿ
ReplyDeleteSuper bro
ReplyDeleteತುಂಬ ಚನ್ನಾಗಿದೆ... ನನ್ನ ಅನುಭವ ನೀ ಬರೆದ ಹಾಗಿದೆ...
ReplyDeleteಇದು ಎಲ್ಲರ ಅನುಭವ......
"ಬೀಗನೇ ಕಾಣದ ಬಾಗಿಲುಗಳು, ಕಳ್ಳತನದ ಇತಿಹಾಸವಿಲ್ಲ.."