2018 ರ ಚುನಾವಣೆ ಹತ್ತಿರ ಬರುತ್ತಿದೆ. ಸುಖ ನಿದ್ರೆಯಲ್ಲಿದ್ದ ಹಕ್ಕಿಗಳು ಬೆಳೆಗೆದ್ದು ಗರಿಗೆದರುತ್ತಾ ಗೂಡಿನಿಂದಾಚೆ ಬರುವಂತೆ ರಾಜಕಾರಣಿಗಳು ತಮ್ಮ ಐಷಾರಾಮಿ ಮನೆ, ಕಾರುಗಳಿಂದ ಈಚೆ ಬಂದು ಬೀದಿಗಿಳಿಯುತ್ತಿದ್ದಾರೆ. ಐದು ವರ್ಷದಲ್ಲಿ ಮೊದಲ ಮೂರು ವರ್ಷ ಇವರೆಲ್ಲರ ಹನಿಮೂನ್ ಪೀರಿಯಡ್.
ನಾಲ್ಕನೇ ವರ್ಷ ಬಂದಂತೆ ಚುನಾವಣೆ ಸಿದ್ದತೆಗಳ ರಂಗೇರುತ್ತದೆ. ಐದನೇ ವರ್ಷದಲ್ಲಿ ಕಂಡು ಕೇಳರಿಯದ ರಾಜಕಾರಣಿಗಳ ಮತ್ತು ಅವರ ದೊಂಬರಾಟಗಳ ಪರಿಚಯವಾಗುತ್ತದೆ. ಈ ದೊಂಬರಾಟಗಳ ಮಳೆ ಬರುವ ಮುನ್ನ ನವಿಲು ಗರಿಬಿಚ್ಚಿ ಕುಣಿದಂತೆ ಕೆಲವು ಮೀಡಿಯ ಚಾನೆಲ್ಲುಗಳು ಬಟ್ಟೆ ಹರಿದುಕೊಂಡು ಅವರಿಂದೆ ಕುಣಿಯುತ್ತಾರೆ.
ಇದೆಲ್ಲದರ ಮಧ್ಯೆ ಏನು ಅರಿಯದ ಅಮಾಯಕ ಪ್ರಜೆಯೆಂದರೆ ಮತದಾರ. ಈ ವೋಟು ರಾಜಕಾರಣಿಗಳಿಗೆ ಮತದಾರ ನೆನಪಿಗೆ ಬರುವುದು ಅವರವರ ಹನಿಮೂನ್ ಪೀರಿಯಡ್ ಮುಗಿದ ಮೇಲೆಯೇ. ಆಡಳಿತ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾಗಲಿ ಕೊನೆಯ ವರ್ಷದವರೆಗೂ ಮತದಾರರನ್ನ ಮೂಸಿಯು ಸಹ ನೋಡುವುದಿಲ್ಲ. ಕೊನೆಯ ವರ್ಷದಲ್ಲಿ ಶುರು ನೋಡಿ ಈ ಆಡಳಿತ ಪಕ್ಷಗಳ ಜನಹಿತ ಕಾರ್ಯಕ್ರಮಗಳು.
ಸಾಮಾನ್ಯ ಮನುಷ್ಯ ಇದ್ದಕ್ಕಿದ್ದಂತೆ ಮತದಾರ ಪ್ರಭುವಾಗುತ್ತಾನೆ. ತಾತ್ಕಾಲಿಕ ಸುಖಗಳ ಧಾರೆಯನ್ನೇ ಎರೆಯುತ್ತಾರೆ . ಇನ್ನು ವಿರೋಧ ಪಕ್ಷಗಳಿಗೆ ಈ ನಾಲ್ಕು ವರ್ಷದಲ್ಲಿ ಇಲ್ಲದ ಸಮಸ್ಯೆಗಳು ಇದ್ದಕ್ಕಿದ್ದಂತೆ ಕಾಣತೊಡಗುತ್ತವೆ. ಸಾಮಾನ್ಯ ಜನರಿಗೆ ತಿಳಿಯದಂತೆಯೇ ಅವರ ಜೊತೆಗೂಡುತ್ತಾರೆ, ಗದ್ದಲಗಳನ್ನೆಬ್ಬಿಸುತ್ತಾರೆ.
ಮುಂದಿನ ಬಾರಿಯೇನಾದರು ಇವರಿಗೆ ಮತ ನೀಡಿದರೆ ಕರ್ನಾಟಕವನ್ನು ಸಿಂಗಾಪೋರ್ ಮಾಡಿಬಿಡುವುರೆಂದು ಬೊಗಳೆ ಕೊಚ್ಚುತ್ತಾರೆ. ತಲೆ ತಲಾಂತರಗಳಿಂದ ಹೀಗೆ ವೋಟಿನ ರಾಜಕಾರಣವನ್ನು ಮಾಡುತ್ತಲೇ ಕರ್ನಾಟಕವನ್ನ ಆಳಿರುವ ಮುಖ್ಯಮಂತ್ರಿಗಳು ಅದೆಷ್ಟೋ.
2004 ರಲ್ಲಿ ಮತದಾರ ಸರಿಯಾದ ನಿರ್ಣಯ ಕೊಟ್ಟಿರಲಿಲ್ಲ, ಅಂದು ಎಲ್ಲ ಪಕ್ಷಗಳಿಗೂ ಮತಗಳು ಹಂಚಿಹೋಗಿದ್ದವು. ಅಲ್ಲಿಂದ ಶುರುವಾಗಿದ್ದು ನೋಡಿ, ವರ್ಷಕ್ಕೊಮ್ಮೆ ಮುಖ್ಯಮಂತ್ರಿಗಳ ಬದಲಾವಣೆಯಾಗತೊಡಗಿತು. ರಾಜಕಾರಣಿಗಳು ಮುಖ್ಯಮಂತ್ರಿಯಾಗಲು ನಾನಾ ತರದ ಸರ್ಕಸ್ ಮಾಡತೊಡಗಿದರು. ಮುಖ್ಯಮಂತ್ರಿಯಾಗದಿದ್ದರು ಪರವಾಗಿಲ್ಲ ಉಪಮುಖ್ಯಮಂತ್ರಿಯಾದರು ಸಾಕೆನ್ನುವ ಆತುರ.
ಯಾಕೆ ಇದೆಲ್ಲ, ಮಂತ್ರಿಗಳಾಗಿ ಜನ ಸೇವೆ ಮಾಡಲೆಂದು ತಿಳಿದರೆ ಇದನ್ನು ಬರೆದ ನಾನು ಮೂರ್ಖನಾಗುವೆ ಮತ್ತು ಓದಿದವರನ್ನು ಮೂರ್ಖರೆನ್ನಬಹುದು. ಮಂತ್ರಿಗಳಾಗುವುದು ಜನಸೇವೆಗಲ್ಲ ಅಧಿಕಾರದ ಚುಕ್ಕಾಣಿ ಹಿಡಿದು, ಸಾಮಾನ್ಯ ಜನರ ಮುಂದೆ ಇವರ ಅಧಿಕಾರದ ದರ್ಪ ತೋರಿಸಲು. ಒಂದು ಕ್ಷೇತ್ರದಲ್ಲಿ ಗೆದ್ದು ಶಾಸಕರೋ , ಮಂತ್ರಿಗಳೋ ಆದರೆ ಸಾಕಲ್ಲ, ಇವರಿಗೆ ಇಲ್ಲಸಲ್ಲದ ವಿಶೇಷ ಸವಲತ್ತುಗಳು ಒದಗಿ ಬರುತ್ತವೆ.
ಸಾಮಾನ್ಯವಾಗಿ ಹತ್ತದಿನೈದು ವರ್ಷದಲ್ಲಿ ಮತದಾನವು ಈ ಕೆಳಗಿನಂತೆ ನಡೆಯುವುದನ್ನು ನಾವು ಗಮನಿಸಬಹುದು.
1.ಕನಿಕರದ ಮತದಾನ: ಕಳೆದ ಬಾರಿ ಯಾವ ರಾಜಕಾರಣಿಗೆ ಮೋಸವಾಯಿತು ಎಂದು ಲೆಕ್ಕ ಹಾಕುವುದು ಮತ್ತೆ ಅವನಿಗೆ ಕನಿಕರದ ಮತ ಹಾಕುವುದು
ವಿ.ಸೂ : ಈ ತರ ಮತ ಹಾಕಿದವರ ಮೇಲೆ ನನಗೆ ಕನಿಕರವಾಗುತ್ತದೆ ಕಾರಣ ಈ ರಾಜಕಾರಣಿಗಳ ಕಿತ್ತಾಟದಲ್ಲಿ ಹೆಚ್ಚು ಮೊಸಹೋದವರು ಸಾಮಾನ್ಯ ಪ್ರಜೆಯೇ ಎಂಬುದರ ಅರಿವಿರಲ್ಲದಿರುವುದು ಇವರ ಅಮಾಯಕತೆ.
2. ಜಾತಿ ಮತದಾನ : ನಮ್ಮ ಜಾತಿ ಎಂದು ಜಾತಿ ಮತ ಹಾಕುವುದು.
ವಿ.ಸೂ : ರಾಜ್ಯಗಳನ್ನ ಹಾಳು ಮಾಡುವುದರಲ್ಲಿ ಮೊದಲ ಸ್ಥಾನ ಈ ತರಹದ ಮತದಾರರಿಗೆ. ಜಾತಿ ಆದಾರದ ಮೇಲೆ ಮತ ಹಾಕುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.
3. ಪೊಳ್ಳು ಭರವಸೆಗಳ ಮತದಾನ: ಸುಳ್ಳು ಭರವಸೆಗಳ ನಂಬಿ ಮತ ಹಾಕುವುದು.
ವಿ. ಸೂ : ಗಮನಿಸಿ, ಕರ್ನಾಟಕವನ್ನು ಸಿಂಗಾಪುರ ಮಾಡುತ್ತಾರೆಂದೋ ಇಲ್ಲ ಐದೇ ವರ್ಷದಲ್ಲಿ ಅಗಾಧ ಸಾಧನೆಗಳ ಪಟ್ಟಿ ತೋರಿಸಿ ಆಶ್ವಾಸನೆ ತೋರಿಸುವವರ ಚರಿತ್ರೆಯೆನ್ನ ಸ್ವಲ್ಪ ತಿಳಿದು ಮತ ನೀಡುವುದು ಸೂಕ್ತ.
ವಿ.ಸೂ : ಈ ತರ ಮತ ಹಾಕಿದವರ ಮೇಲೆ ನನಗೆ ಕನಿಕರವಾಗುತ್ತದೆ ಕಾರಣ ಈ ರಾಜಕಾರಣಿಗಳ ಕಿತ್ತಾಟದಲ್ಲಿ ಹೆಚ್ಚು ಮೊಸಹೋದವರು ಸಾಮಾನ್ಯ ಪ್ರಜೆಯೇ ಎಂಬುದರ ಅರಿವಿರಲ್ಲದಿರುವುದು ಇವರ ಅಮಾಯಕತೆ.
2. ಜಾತಿ ಮತದಾನ : ನಮ್ಮ ಜಾತಿ ಎಂದು ಜಾತಿ ಮತ ಹಾಕುವುದು.
ವಿ.ಸೂ : ರಾಜ್ಯಗಳನ್ನ ಹಾಳು ಮಾಡುವುದರಲ್ಲಿ ಮೊದಲ ಸ್ಥಾನ ಈ ತರಹದ ಮತದಾರರಿಗೆ. ಜಾತಿ ಆದಾರದ ಮೇಲೆ ಮತ ಹಾಕುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.
3. ಪೊಳ್ಳು ಭರವಸೆಗಳ ಮತದಾನ: ಸುಳ್ಳು ಭರವಸೆಗಳ ನಂಬಿ ಮತ ಹಾಕುವುದು.
ವಿ. ಸೂ : ಗಮನಿಸಿ, ಕರ್ನಾಟಕವನ್ನು ಸಿಂಗಾಪುರ ಮಾಡುತ್ತಾರೆಂದೋ ಇಲ್ಲ ಐದೇ ವರ್ಷದಲ್ಲಿ ಅಗಾಧ ಸಾಧನೆಗಳ ಪಟ್ಟಿ ತೋರಿಸಿ ಆಶ್ವಾಸನೆ ತೋರಿಸುವವರ ಚರಿತ್ರೆಯೆನ್ನ ಸ್ವಲ್ಪ ತಿಳಿದು ಮತ ನೀಡುವುದು ಸೂಕ್ತ.
ಇಲ್ಲಿ ಕೆಲವು ಬದಲಾವಣೆಗಳಾಗಬೇಕು. ಇಷ್ಟು ದಿನ ಮೋಸದ ಬಲೆಯೆಳೆದ ವೋಟಿನ ರಾಜಕರಣಿಗಳನ್ನ ಪ್ರಶ್ನೆ ಮಾಡುವ ಧೈರ್ಯ ಸಾಮಾನ್ಯ ಜನರಲ್ಲಿ ಬೆಳೆಯಬೇಕು. ಅಶ್ವಾಸನೆಗಳನ್ನ ಪರಿಶೀಲಿಸಿ, ಯಾವುದು ಸರಿ ಯಾವುದು ಬೊಗಳೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ರಾಜಕಾರಣಿಗಳ ಬುದ್ಧಿಯನ್ನು ಪರೀಕ್ಷಿಸುವ ಪ್ರಯತ್ನ ನಡೆಯಬೇಕು. ಇದಕ್ಕೊಂದು ಉದಾಹರಣೆಯನ್ನ ನೀಡುವೆ. (ವಿ. ಸೂ : ನಾನು ಯಾವ ಪಕ್ಷದ ಪರವಲ್ಲ. ಯಾವ ರಾಜಕಾರಣಿಯು ಉತ್ತಮ ಕೆಲಸ ಮಾಡಿದರೆ ಹೊಗಳುವ ಕೆಲಸ ಮತ್ತು ತಪ್ಪು ಮಾಡಿದರೆ ಉಗಿಯುವುದು ನಮ್ಮ ಧರ್ಮ ಸಿದ್ದ ಹಕ್ಕು. )
ಮೊನ್ನೆ ಟ್ರಾನ್ಸ್ ಫಾರ್ಮ್ ಮಹಾರಾಷ್ಟ್ರ ಎಂಬ ಕಾರ್ಯಕ್ರಮ ದೂರದರ್ಶನದಲ್ಲಿ ಬಿತ್ತರವಾಗುತ್ತಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನಾವಿಸ್ ಮತ್ತು ಅಕ್ಷಯ್ ಕುಮಾರ್ ಸ್ಟೇಜ್ ಮೇಲೆ ಕುಳಿತು ಚರ್ಚಿಸುತ್ತಿದ್ದರು. ಕೆಳಗೆ ವಿದ್ಯಾರ್ಥಿಗಳೆಲ್ಲ ಕುಳಿತು ಆಲಿಸುತ್ತಿದ್ದರು. ಆ ಕ್ಷಣದಲ್ಲಿ ಅಕ್ಷಯ್ ಕುಮಾರ್ ತಟ್ಟನೆ ಮೈಕ್ ಹಿಡಿದು ಮುಖ್ಯಮಂತ್ರಿಯವರಿಗೊಂದು ಸಲಹೆ ನೀಡಿಯೇ ಬಿಟ್ಟರು. ಆ ಸಲಹೆ ಹೀಗಿತ್ತು.
ವಿದೇಶಗಳಲ್ಲಿದ್ದಂತೆಯೇ ನಮ್ಮಲ್ಲೂ ಕೂಡ ಪ್ರತಿ ಕಿಲೋಮೀಟರ್ ಗೊಂದು ಶೌಚಾಲಯ ನಿರ್ಮಿಸುವುದರಿಂದ ಮತ್ತು ಮುಂದುವರಿದು ಅದಕ್ಕೊಂದು ಮೊಬೈಲ್ ಆಪ್ ಮಾಡಿ ಮೊಬೈಲ್ ಬಳಕೆದಾರರಿಗೆ ತೋರಿಸುವುದರಿಂದ ಬಹಳ ಉಪಯೋಗವಾಗುತ್ತದೆಂದು ಸಲಹೆ ನೀಡಿದರು. ಇದರಿಂದ ಆಸಕ್ತರಾದ ಮುಖ್ಯಮಂತ್ರಿಗಳು ಖುಷಿಯಿಂದ ಒಪ್ಪಿಗೆ ನೀಡಿ ಜೊತೆಗೆ ಅದನ್ನು ಹೇಗೆ ಕಾರ್ಯರೂಪಕ್ಕೆ ತರಬಹುದೆಂದು ವಿವರಣೆಯನ್ನು ಸಹ ನೀಡಿದರು. ಅವರು ಬಳಸಿದ ಶಬ್ದಗಳು ಕೆಲವು ನನ್ನನ್ನು ಅಚ್ಚರಿ ಗೊಳಿಸಿತು.ಜಿಯೋ ಟ್ಯಾಗ್ ಮಾಡಿ ಎಲ್ಲ ಶೌಚಾಲಯಗಳನ್ನು ಮೊಬೈಲ್ ನಲ್ಲಿ ಲೋಕೇಟ್ ಮಾಡಿಸಬಹುದು ಎಂದೆಲ್ಲ ವಿವರವಾಗಿ ಮಾತನಾಡಿದ್ದನ್ನು ಕೇಳಿ ಖುಷಿಯಾಯಿತು.
ಹೀಗೆ ಸಲಹೆಗಳನ್ನ ವಿವರವಾಗಿ ಆಲಿಸಿ ಸರಿಯೆನ್ನಿಸಿದರೆ ಕಾರ್ಯರೂಪಕ್ಕೆ ಹೇಗೆ ತರಬಹುದು ಎಂಬುದನ್ನು ಆಲೋಚಿಸುವಂತಹ ರಾಜನೀತಿಜ್ಞರು ಕರ್ನಾಟಕಕ್ಕೆ ಬೇಕಿದೆ. ಯಾವ ಪಕ್ಷದವವರಾದರು ಸರಿ, ಕರ್ನಾಟಕದ ಒಳಿತು ಮತ್ತು ದೇಶದ ಒಳಿತನ್ನು ಯೋಚಿಸಿ ಕರ್ನಾಟಕವನ್ನು ಆಡಳಿತ ಮಾಡುವ ಒಬ್ಬ ಖಡಕ್ ಮುಖ್ಯ ಮಂತ್ರಿ ಬೇಕಿದೆ. ಮತದಾರ ಪ್ರಭುಗಳು ಇಂತಹ ವಿಷಯಗಳನ್ನ ತಲೆಯಲ್ಲಿಟ್ಟುಕೊಂಡು ಮತದಾನ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.
- ಪುಟ್ಟಾರಾಧ್ಯ ಸಿದ್ದರಾಜ್

There is one more type of voter that I ve seen :
ReplyDeleteಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಹಣಕ್ಕೆ ಆಸೆಬಿದ್ದು, ದುಡ್ಡು ಕೊಟ್ಟವನಿಗೆ ವೋಟ್ ಹಾಕಿ, ಇನ್ನೈದು ವರ್ಷ ಅವನಿಗು ನನಗು ಸಂಬಂಧನೇ ಇಲ್ಲ ಅಂತ ತಿಳಿದು ನಿದ್ದೆ ಮಾಡಿ, ಐದು ವರ್ಷಗಳ ನಂತರ ಅದೇ ದುಡ್ಡಿಗೆ ಎಚ್ಚರ ಆಗೋ ಸತ್ಪ್ರಜೆ.
ಹಹ ಹೌದಲ್ಲ. ಮರೆತೇ ಹೋಗಿತ್ತು.
ReplyDelete